Ad imageAd image

ದರ್ಶನ್ ಎ1 ಆರೋಪಿನಾ? ಗೃಹ ಸಚಿವರು ಏನು ಹೇಳಿದರು?

ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳೆಲ್ಲ ಜೈಲು ಸೇರಿ ಮೂರು ತಿಂಗಳು ಆಗುತ್ತಾ ಬರುತ್ತಿದೆ.

Nagesh Talawar
ದರ್ಶನ್ ಎ1 ಆರೋಪಿನಾ? ಗೃಹ ಸಚಿವರು ಏನು ಹೇಳಿದರು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ(Murder) ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳೆಲ್ಲ ಜೈಲು ಸೇರಿ ಮೂರು ತಿಂಗಳು ಆಗುತ್ತಾ ಬರುತ್ತಿದೆ. ಹೀಗಾಗಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕಿದೆ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ತನಿಖೆ ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ ಕೋರ್ಟ್ ಗೆ ಚಾರ್ಜ್ ಶೀಟ್(chargesheet) ಸಲ್ಲಿಸುತ್ತೇವೆ. ಆರೋಪ ಪಟ್ಟಿ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ಕೆಲ ಸಲಹೆ ನೀಡಿದ್ದು, ಅವುಗಳ ಬದಲಾವಣೆ ಮಾಡಿಕೊಂಡು ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದಿದ್ದಾರೆ.

ಇದೆಲ್ಲದರ ನಡುವೆ ಈ ಪ್ರಕರಣದಲ್ಲಿ ನಟ ದರ್ಶನ್(D Boss) ಆಪ್ತೆ ಪವಿತ್ರಾಗೌಡ ಎ1, ದರ್ಶನ್ ಎ2 ಆರೋಪಿ ಎಂದು ಇಷ್ಟು ದಿನಗಳ ಕಾಲ ಹೇಳಲಾಗಿದೆ. ಈಗ ಚಾರ್ಜ್ ಶೀಟ್ ನಲ್ಲಿ ದರ್ಶನ್ ಎ1 ಆರೋಪಿ ಎನ್ನಲಾಗುತ್ತಿದೆ. ಈ ಬಗ್ಗೆ ಗೃಹ ಸಚಿವ(Home Minister) ಜಿ.ಪರಮೇಶ್ವರ್ ಅವರನ್ನು ಮಾಧ್ಯಮದವರು ಕೇಳಿದಾಗ, ದೋಷಾರೋಪ ಪಟ್ಟಿ ಸಲ್ಲಿಸುವುದು ಪೊಲೀಸನವರು. ಯಾರು ಎ1, ಎ2 ಎನ್ನುವುದು ಅವರು ನಿರ್ಧರಿಸುತ್ತಾರೆ. ನಾವಲ್ಲ. ಬಿಜೆಪಿಯವರು ಮಾಡುವ ಆರೋಪಗಳಿಗೆ ನಾವು ಉತ್ತರ ನೀಡುತ್ತಾ ಇರಲು ಆಗುವುದಿಲ್ಲ ಎಂದಿದ್ದಾರೆ.

ಯಾವುದೇ ಅಪಾರಧ ಕೃತ್ಯ ನಡೆದ ಬಳಿಕ ಅದಕ್ಕೆ ಸಂಬಂಧಿಸಿದವರ ಬಂಧನವಾದ ಮೇಲೆ 90 ದಿನಗಳ ಒಳಗಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಇಲ್ಲದಿದ್ದರೆ ಆರೋಪಿಗಳು ಖುಲಾಸೆಯಾಗುತ್ತಾರೆ. ಇನ್ನು ದರ್ಶನ್ ಇದುವರೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಚಾರ್ಜ್ ಶೀಟ್ ಸಿಲ್ಲಿಕೆಯಾದ ಮೇಲೆ ಅದರಲ್ಲಿರುವ ಅಂಶಗಳನ್ನು ಅವರ ವಕೀಲರು ಪರಿಶೀಲನೆ ಮಾಡಿ, ಜಾಮೀನಿಗೆ(Bail) ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಎ1 ಆರೋಪಿ, ಎ2 ಆರೋಪಿನಾ ಎನ್ನುವುದಕ್ಕಿಂತ ಕೊಲೆ ಪ್ರಕರಣದಲ್ಲಿ ಅವರ ಪಾತ್ರ ಇತ್ತೇ? ಇದ್ದರೆ ಅದಕ್ಕೆ ಆಗುವ ಶಿಕ್ಷೆ ಏನು ಅನ್ನೋ ಕುತೂಹಲ ಮೂಡಿದೆ.

WhatsApp Group Join Now
Telegram Group Join Now
Share This Article