ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪೆಟ್ರೋಲ್ ಅನ್ನು ರಾಜ್ಯದಲ್ಲಿ ಜಿಎಸ್ ಟಿ ವ್ಯಾಪ್ತಿಗೆ ತರುವ ವಿಚಾರ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಮಾರ್ಚ್ ನಲ್ಲಿ ಬಜೆಟ್ ನಡೆಯುತ್ತೆ. ರಾಜ್ಯದಲ್ಲಿ ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್ ತರಬೇಕಾ ಬೇಡವಾ ಅನ್ನೋ ಪರಿಶೀಲನೆ ನಡೆಸಲಾಗುವುದು. ರಾಜ್ಯಗಳಿಗೆ ಲಾಭವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡಿದರೆ ಜಿಎಸ್ ಟಿ ವ್ಯಾಪ್ತಿಗೆ ತರಬಹುದು. ಇಲ್ಲವಾದರೆ ಯೋಚಿಸಬೇಕಾಗುತ್ತೆ ಎಂದಿದ್ದಾರೆ.