ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಳೆದ ಎರಡ್ಮೂರು ತಿಂಗಳಿನಿಂದ ಮಹಿಳೆಯರಿಗೆ ಗೃಹಲಕ್ಷ್ಮಿ(Gruha lakshmi) ಯೋಜನೆಯ ಮಾಸಿಕ 2 ಸಾವಿರ ರೂಪಾಯಿ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(lakshmi Hebbalkar) ಮಾತನಾಡಿದ್ದಾರೆ. ಇನ್ನು 10 ದಿನದೊಳಗಾಗಿ 2 ತಿಂಗಳ ಹಣ ಹಾಕಲಾಗುತ್ತದೆ ಎಂದು ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.
ಮೇ ತಿಂಗಳ ಹಣ ಹಾಕಿದ್ದೇವೆ. ಜೂನ್, ಜುಲೈ ತಿಂಗಳ ಹಣ ಬಾಕಿ ಇದೆ. ತಾಂತ್ರಿಕ ಕಾರಣದಿಂದ ಬಾಕಿ ಉಳಿದಿದೆ. ಡಿಬಿಟಿ(DBT) ತಾಂತ್ರಿಕ ಕೆಲಸಗಳು ನಡೆಯುತ್ತಿವೆ. 10 ದಿನದೊಳಗಾಗಿ ಹಣ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಕೊಡಲಾಗುತ್ತಿದೆ. ಚುನಾವಣೆ(Election) ಪೂರ್ವದಲ್ಲಿ ನೀಡಿದ ಭರವಸೆ ಇದು. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.