ಪ್ರಜಾಸ್ತ್ರ ಸುದ್ದಿ
ಕಾಲಿವುಡ್ ನಟ ಸೂರ್ಯ ನಟನೆಯ ಕಂಗುವ ನವೆಂಬರ್ 14 ಗುರುವಾರ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಸೂರ್ಯನ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ, ಇಡೀ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು 350 ಕೋಟಿ ರೂಪಾಯಿ ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನುವುದು ಉದ್ಯಮದ ಮಾತುಗಳು.
ಶಿವ ನಿರ್ದೇಶನದಲ್ಲಿ ಕಂಗುವ ಹೊಸ ಜಗತ್ತಿನ ಕಥೆಯನ್ನು ಹೇಳುತ್ತದೆ. ಬಾಲಿವುಡ್ ನಟಿ ದಿಶಾ ಪಟಾನಿ, ನಟ ಬಾಬಿ ಡಿಯೋಲ್, ಕಾರ್ತಿ, ಯೋಗಿ ಬಾಬು, ನಟರಾಜನ್ ಸುಬ್ರಮಣ್ಯಂ, ರೆಡಿನ್ ಕಿಂಗ್ಸ್ಲಿ ಸೇರಿದಂತೆ ಅನೇಕರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಈಗಾಗ್ಲೇ ಆನ್ಲೈನ್ ನಲ್ಲಿ ಲೀಕ್ ಆಗಿದೆ. ಹಲವಾರು ವೆಬ್ ಸೈಟ್ ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿರುವ ಅಮರನ್ ಸಿನಿಮಾ ಸಹ ಲೀಕ್ ಆಗಿತ್ತು.