ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): 140 ಕೋಟಿ ಜನ ಮನದುಂಬಿ ಸ್ವಾಗತಿಸಿದ ಏಕ್ ಭಾರತ ಸದೃಢ ಭಾರತ ಎಂಬಂತೆ ಮೋದಿಜಿಯವರ 3.0 ಬಜೆಟ್ ಇದೆ. ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೈಗಾರಿಕಾ, ಉತ್ಪಾದನೆ ಸೇರಿದಂತೆ 9 ಅಂಶಗಳನ್ನು ಒಳಗೊಂಡಿದೆ. ಮಹಿಳೆಯರು ಉದ್ಯಮಿದಾರರಿಗೆ ಬಡವರ ಶ್ರಮಿಕರ ಕಾರ್ಮಿಕರ ಮಧ್ಯಮ ವರ್ಗದವರ ಆರ್ಥಿಕವಾಗಿ ಮೇಲೆತ್ತುವ ಬಜೆಟ್ ಇದಾಗಿದೆ. ಜೊತೆಗೆ 4 ಕೋಟಿ ವೇತನದಾರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲ ಆಗುವ ಬಜೆಟ್ ನೀಡಿದ್ದು ಭಾರತ ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ. – ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಬಿಜೆಪಿ ಮುಖಂಡರು
ಬಜೆಟ್ ನಲ್ಲಿ ರೈತರಿಗೆ ವಿಶೇಷ ಅನುದಾನವಿಲ್ಲ. ತಂತ್ರಜ್ಞಾನ ಮುಂದುವರೆದಿದೆ. ಆದರೆ, ಕೃಷಿ ಉಪಕರಣಗಳ ಖರೀದಿಗೆ ಶೇಕಡ 10-15 ಜಿಎಸ್ ಟಿ ಇದೆ. ಜಿಎಸ್ ಟಿ ಇಲ್ಲದೆ ರೈತರಿಗೆ ಕೃಷಿ ಉಪಕರಣಗಳು ಕೊಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರತಿ ಜೋಡುತ್ತು ಇರುವ ರೈತರಿಗೆ 10 ರಿಂದ 11 ಸಾವಿರ ರೂಪಾಯಿ ಕೊಡಬೇಕು. ಇದರಿಂದ ಆತ ತಂತ್ರಜ್ಞಾನದ ಸಹಾಯವಿಲ್ಲದೆ ಕೃಷಿ ಮಾಡಿ ಉತ್ಪಾದನಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾನೆ. – ಬಸನಗೌಡ ಧರ್ಮಗೊಂಡ, ಉತ್ತರ ವಲಯ ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ರೈತರ ಬೆಳೆ ಸಂಗ್ರಹಣೆ ದಾಸ್ತಾನು ಮಾರುಕಟ್ಟೆ ಜಾಲ ಸೇರಿ ಸದೃಢಗೊಳಿಸಲು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ಹಾಗೂ ಸಹಕಾರಿ ಕ್ಷೇತ್ರಕ್ಕೆ, ನವ ಉದ್ಯಮಿಗಳಿಗೆ ಉದ್ಯೋಗ ಸೃಷ್ಟಿ ಇಟ್ಟುಕೊಂಡು ಉತ್ತೇಜಿಸುವ ಬಜೆಟ್ ಆಗಿದೆ. – ಶೈಲಜಾ ಸ್ಥಾವರಮಠ, ನಿರ್ದೇಶಕರು, ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಸಂಸ್ಥೆ