ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ದುಡ್ಡು ಇದ್ದರೆ ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತು ಸತ್ಯವಾಗುತ್ತಲೇ ಇರುತ್ತೆ. ಜೈಲುಗಳ ವಿಚಾರದಲ್ಲಿ ಇದು ಆಗಾಗ ಹೊರ ಬರುತ್ತಿರುತ್ತೆ. ರಾಜ್ಯದ ಬಹುತೇಕ ಜೈಲುಗಳಲ್ಲಿ ಅಂದರ್ ಬಹಾರ್ ವ್ಯವಹಾರವೇ ಬೇರೆ ಎನ್ನುತ್ತಾರೆ. ಹಣ ಇದ್ದರೆ ಇಲ್ಲಿ ಎಲ್ಲವೂ ಸಾಧ್ಯ ಎಂದು ಜೈಲಿಗೆ ಹೋಗಿ ಬಂದ ಅನೇಕರು ಹೇಳುತ್ತಾರೆ. ಇದೀಗ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ ವಿಡಿಯೋ ಸಾಕಷ್ಟು ಚರ್ಚೆಯಲ್ಲಿದೆ. ಗರಿಗರಿ ನೋಟು, ಎಣ್ಣೆ ಬಾಟಲ್, ಮೊಬೈಲ್ ಫೋನ್ ಸೇರಿದಂತೆ ಬಂದಾಸ್ ಜೀವನ ನಡೆಸಲು ಏನು ಬೇಕು ಎಲ್ಲವೂ ಇದೆ ಎಂದು ವಿಡಿಯೋದಲ್ಲಿ ಸಾಬೀತಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಜೈಲಿನ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು, ಇದೆಲ್ಲವೂ ತಮ್ಮ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಪಕ್ಕಾ ಪ್ಲಾನ್ ಮಾಡಿ ಇದೆಲ್ಲ ಮಾಡಿದ್ದಾರೆ. ನಾನು ಅಕ್ಟೋಬರ್ 14ರಂದು ಜೈಲಿನ ಅಧೀಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ವಿಡಿಯೋದಲ್ಲಿ ಅಕ್ಟೋಬರ್ 15ಎಂದು ಇದೆ. ಅಲ್ಲದೆ ಅಕ್ಟೋಬರ್ 15, 16, 17ರಂದು ಹಿರಿಯ ಅಧಿಕಾರಿಗಳು ಜೈಲಿಗೆ ತನಿಖೆ ನಡೆಸಲು ಬಂದಿದ್ದರು. ಈ ಷಡ್ಯಂತ್ರದ ಬಗ್ಗೆ ಆದಷ್ಟು ಬೇಗ ಹೇಳುತ್ತೇನೆ ಎಂದಿದ್ದಾರೆ.