ಪ್ರಜಾಸ್ತ್ರ ಸುದ್ದಿ
ಶ್ರೀಕಾಕುಳಂ(Srikakulam): ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ ಪರಿಣಾಮ ಕಾಲ್ತುಳಿತ ಉಂಟಾಗಿ 9 ಜನರು ಜೀವ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದಿದೆ. ಓರ್ವ ಬಾಲಕ, 8 ಮಹಿಳೆಯರು ಸೇರಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಈ ದೇವಸ್ಥಾನ ನಿರ್ಮಿಸಿರುವ ವ್ಯಕ್ತಿ 94 ವರ್ಷದ ಹರಿಮುಕುಂಡ ಪಾಂಡಾ ಎಂಬುವರು ಮಾತನಾಡಿದ್ದು, ಒಂದೇ ಸಲಕ್ಕೆ ಅಷ್ಟೊಂದು ಜನರು ಬಂದರೆ ನಾನು ಏನು ಮಾಡಬೇಕು ಎಂದಿದ್ದಾರೆ.
ಈ ದುರಂತದ ಹೊಣೆಯನ್ನು ತಾವು ಹೊತ್ತುಕೊಳ್ಳಲು ನಿರಾಕರಿಸಿದ್ದಾರೆ. ಎಂದಿನಂತೆ ಸಾಮಾನ್ಯವಾಗಿರುತ್ತೆ ಎಂದುಕೊಂಡಿದ್ದಾರೆ. ಆದರೆ, ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲು ಆಗಿಲ್ಲ. ಸರತಿ ಸಾಲಿನಲ್ಲಿ ಜನರಲ್ಲಿ ಕಳಿಸಲಾಗುತ್ತೆ. ಜನಸಂದಣಿ ಇತ್ತು. ಏನಾಗಿದೆ ಗೊತ್ತಿಲ್ಲ ಎನ್ನುತ್ತಿದ್ದಾರೆ.




