ಪ್ರಜಾಸ್ತ್ರ ಸುದ್ದಿ
ಮುದ್ದೇಬಿಹಾಳ(Muddebihala): ಅಂಗನವಾಡಿ ಟೀಚರ್ಸ್ ಇಬ್ಬರು ಹೊಡೆದಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಇವರ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಪಿಲೆಕಮ್ಮ ನಗರದ ಅಂಗನವಾಡಿ ಕೇಂದ್ರದಲ್ಲಿ ಶಾಂತಾ ಮಾಮನಿ ಹಾಗೂ ರೇಣುಕಾ ನಾಯಕ ಎನ್ನುವ ಇಬ್ಬರ ನಡುವೆ ಹೊಡೆದಾಟವಾಗಿದೆ. ರೇಣುಕಾ ನಾಯಕ ತಲೆಗೆ ಪೆಟ್ಟಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಗಮೇಶ ನಗರದ ನಂಬರ್ 1 ಅಂಗನವಾಡಿ ಕೇಂದ್ರಕ್ಕೆ ಶಾಂತಾ ಮಾಮನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಪಿಲೆಕಮ್ಮ ಅಂಗನವಾಡಿ ಕೇಂದ್ರಕ್ಕೆ ರೇಣುಕಾ ನಾಯಕ ಅವರನ್ನು ಪ್ರಭಾರಿಯಾಗಿ ನಿಯೋಜಿಸಲಾಗಿದೆ. ಆದರೆ, ಶುಕ್ರವಾರ ಏಕಾಏಕಿ ಬಂದ ಶಾಂತಾ ಮಾಮನಿ ಗಲಾಟೆ ಮಾಡಿದ್ದಾರಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ವೈಯಕ್ತಿಕ ಕಾರಣಕ್ಕೆ ಗಲಾಟೆ ನಡೆದಿದೆ ಎಂದು ಸಿಡಿಪಿಓ ಶಿವಮೂರ್ತಿ ಕುಂಬಾರ ಹೇಳಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದ್ದು, ಗಲಾಟೆಗೆ ಕಾರಣ ಏನು ಅನ್ನೋ ಸತ್ಯ ತಿಳಿದು ಬರಬೇಕಿದೆ.