ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಪಾಕಿಸ್ತಾನದ 9 ಉಗ್ರ ಸಂಘಟನೆಯ ಕೇಂದ್ರ ಕಚೇರಿಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿದೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಯ ಪ್ರತಿಕಾರವಾಗಿ ಭಾರತೀಯ ಯೋಧರು ಕ್ಷಿಪಣಿ ದಾಳಿ ನಡೆಸಿ ಪಾಕ್ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈ ಬಗ್ಗೆ ರಾಜಕೀಯ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವೀರ ಯೋಧರ ಕಾರ್ಯಾಚರಣೆ ಬಗ್ಗೆ ಹಮ್ಮೆ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಮುಗ್ದ ಸಹೋದರರ ಹತ್ಯೆಗೆ ಭಾರತ ಆಪರೇಷನ್ ಸಿಂಧೂರ ಮೂಲಕ ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ದೇಶದ ಜನರ ಮೇಲೆ ನಡೆಯುವ ದಾಳಿ ತಕ್ಕ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರ ಬದ್ಧವಾಗಿದೆ. ಭಯೋತ್ಪಾದನೆಯನ್ನು ಮೂಲದಿಂದಲೇ ಕಿತ್ತೊಗೆಲು ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಜೈ ಹಿಂದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜೈ ಹಿಂದ್, ಜೈ ಹಿಂದ್ ಕಿ ಸೇನಾ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಭಾರತ್ ಮಾತಾ ಕಿ ಜೈ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಯಾರಾದರೂ ಭಾರತೀಯ ನಾಗರೀಕರಿಗೆ ಬೆದರಿಕೆ ಹಾಕಿದರೆ ಅವರಿಗೆ ಅದೇ ಗತಿಯನ್ನು ಮಾಡಲಾಗುತ್ತದೆ ಎಂದು ನಮ್ಮ ಸೈನಿಕರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕೇಂದ್ರ ಸರ್ಕಾರದ ಜೊತೆಗೆ ನಾವು ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಆಪರೇಷನ್ ಸಿಂಧೂರ ಹಿಂದಿನ ವೀರ ಯೋಧರಿಗೆ ನನ್ನ ಸೆಲ್ಯೂಟ್. ಭಾರತ ಎಂದಿಗೂ ಉಗ್ರರ ಹಿಂಸೆಯನ್ನು ಸಹಿಸುವುದಿಲ್ಲ. ಪಹಲ್ಗಾಮ್ ನಲ್ಲಿ ಮುಗ್ಧ ಜನರನ್ನು ಬಲಿ ಪಡೆದಿದ್ದಕ್ಕೆ ತಕ್ಕ ಉತ್ತರ ನೀಡಲಾಗಿದೆ. ನಮ್ಮ ವೀರ ಯೋಧರ ಪ್ರಾಣ ಕಳೆದುಕೊಂಡವರಿಗೆ, ಅವರ ಕುಟುಂಬಸ್ಥರಿಗೆ ಹಾಗೂ ಶಾಂತಿ ಬಯಸುವ ಪ್ರತಿ ಭಾರತೀಯರಿಗೆ ನ್ಯಾಯ ನೀಡಿದ್ದಾರೆ. ಕರ್ನಾಟಕ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.