ಪ್ರಜಾಸ್ತ್ರ ಸುದ್ದಿ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ದಿ ಡೆವಿಲ್ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಇದ್ರೆ ನೆಮ್ಮದಿಯಾಗ್ ಇರ್ಬೇಕು ಎನ್ನುವ ಸಾಲಿನ ಹಾಡು ದರ್ಶನ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಈಗಾಗ್ಲೇ ಕೋಟಿ ಕೋಟಿ ಸಂಖ್ಯೆಯಲ್ಲಿ ವೀಕ್ಷಣೆ ಕಂಡಿದೆ. ಆದರೆ, ಈ ಹಾಡು ದಿವಂಗತ ಸಂಚಾರಿ ವಿಜಯ್ ನಟನೆಯ ನಾನು ಅವನಲ್ಲ ಅವಳು ಚಿತ್ರದಲ್ಲಿನ ‘ವಾರೆ ವಾರೆ’ ಹಾಡಿನ ಕಾಪಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆ ಚಿತ್ರದ ನಿರ್ದೇಶಕ ಬಿ.ಎಸ್ ಲಿಂಗದೇವರು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಚಿತ್ರದ ಹಾಡಿಗೂ ದಿ ಡೆವಿಲ್ ಚಿತ್ರದ ಹಾಡಿಗೆ ಸಾಕಷ್ಟು ವ್ಯತ್ಯಾಸಗಳಿವೆ. ಇದು ಎಲ್ಲಿಯೂ ನಮ್ಮ ಹಾಡಿನ ಹೋಲಿಕೆ ಅಥವ ನಕಲು ಎನಿಸುತ್ತಿಲ್ಲ. ಹಾಗೇ ಅನಿಸುತ್ತಿದೆ ಎಂದು ಹೇಳುವವರಿಗೆ ಅವರ ವೈಯಕ್ತಿಕ ಅಭಿಪ್ರಾಯ. ಡೆವಿಲ್ ಚಿತ್ರದ ಸಂಗೀತ ನಿರ್ದೇಶಕರು ನಮ್ಮ ಹಾಡಿನಿಂದ ಸ್ಪೂರ್ತಿ ಪಡೆದಿದ್ದರೆ ನನಗೆ ಯಾವ ಬೇಸರವೂ ಇಲ್ಲ ಎನ್ನುವ ಮೂಲಕ ಈಗ ಎದ್ದಿರುವ ವಿಚಾರಕ್ಕೆ ನಿರ್ದೇಶಕ ಬಿ.ಎಸ್ ಲಿಂಗದೇವರು ತೆರೆ ಎಳೆದಿದ್ದಾರೆ.