ಪ್ರಜಾಸ್ತ್ರ ಸುದ್ದಿ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್(AR Rahman) ಹಾಗೂ ಸಾಯಿರಾ ಬಾನು(Saira Banu) ಅವರ ದಾಂಪತ್ಯ ಮುರಿದು ಬಿದ್ದಿದೆ. 29 ವರ್ಷಗಳ ತಮ್ಮ ಸಂಸಾರಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಇಬ್ಬರೂ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇದಕ್ಕೆ ಹಲವು ರೀತಿಯ ವದಂತಿಗಳು(Rumours) ಕೇಳಿ ಬರುತ್ತಿವೆ. ಅದರಲ್ಲಿ ಸಂಗೀತಗಾರ್ತಿ ಮೋಹಿನಿ ಡೇ(Mohini Dey) ಜೊತೆಗಿನ ಸಂಬಂಧ ಎಂದು ಹೇಳಲಾಗುತ್ತಿದೆ. ಇದಕ್ಕೆ ಆಕೆ ಉತ್ತರ ನೀಡಿದ್ದಾಳೆ.
ಈ ಕುರಿತು ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ನಾನು ಅಮೆರಿಕ್ಕೆ ಹೋಗುವುದಕ್ಕೂ ಮೊದಲು 8 ವರ್ಷಗಳ ಕಾಲ ಎ.ಆರ್ ರೆಹಮಾನ್ ಅವರೊಂದಿಗೆ ಬಾಸ್ ವಾದಕಿಯಾಗಿ ಕೆಲಸ ಮಾಡಿದ್ದಾನೆ. ಅವರು ನನಗೆ ತಂದೆಯ ಸಮಾನರು. ಸಂಬಂಧಗಳು ಅವರ ವೈಯಕ್ತಿಕ ವಿಚಾರ. ಎಲ್ಲರೂ ಕರುಣೆಯಿಂದ ನಡೆದುಕೊಳ್ಳಬೇಕು ಎಂದಿದ್ದಾರೆ. ರೆಹಮಾನ್ ದಂಪತಿ ಡಿವೋರ್ಸ್(Divorce) ಸಂದರ್ಭದಲ್ಲಿಯೇ ಮೋಹಿನಿ ಡೇ ಸಹ ಡಿವೋರ್ಸ್ ಗೆ ಅರ್ಜಿ ಹಾಕಿದ್ದರಿಂದ ಹಲವು ಗಾಸಿಪ್ ಗಳಿಗೆ ಇದು ಕಾರಣವಾಗಿದೆ.