ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್(Budget) ಮಂಡಿಸಿದರು. ಎನ್ ಡಿಎ ಮೈತ್ರಿಕೂಟದ ಸರ್ಕಾರದ 18ನೇ ಲೋಕಸಭೆಯ ಮೊದಲ ಬಜೆಟ್ ಆಗಿದೆ. ಜನರು ನಿರೀಕ್ಷೆಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ವಿಪಕ್ಷಗಳ ಮಾತು.
‘ಇದು ಸೇವ್ ಮೋದಿ ಗೌರ್ನಮೆಂಟ್ ಬಜೆಟ್’
ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಜೆಟ್ ಕುರಿತು ಎಕ್ಸ್ ನಲ್ಲಿ ಬರೆದಿದ್ದು, ಇದು ಸೇವ್ ಮೋದಿ ಗೌರ್ನಮೆಂಟ್ ಬಜೆಟ್ ಎಂದಿದ್ದಾರೆ. ಯುವಕರಿಗೆ(Job) ಉದ್ಯೋಗವಿಲ್ಲ. ಕಳೆದ 10 ವರ್ಷಗಳಿಂದ ಬರೀ ಘೋಷಣೆಗಳನ್ನು ಹೇಳುತ್ತಿದ್ದಾರೆ. ರೈತರಿಗೆ(Farmers) ಎಂಎಸಿಪಿ, ದುಪ್ಪಟ್ಟು ಆದಾಯ ಎಲ್ಲವೂ ಮೋಸ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಧ್ಯಮ ಹಾಗೂ ಗ್ರಾಮೀಣ ಭಾಗದ ಜನರಿಗೆ ಯಾವುದೇ ರೀತಿಯ ಪೂರಕ ಬಜೆಟ್ ಇಲ್ಲ ಎಂದಿದ್ದಾರೆ.
‘ಕುರ್ಚಿ ಉಳಿಸಿ ಬಜೆಟ್’
ಇದು ಬರೀ ಕಾಪಿ ಪೇಸ್ಟ್ ಬಜೆಟ್. ಒಂದು ರೀತಿಯಲ್ಲಿ ಕುರ್ಚಿ ಉಳಿಸಿ ಬಜೆಟ್ ಆಗಿದೆ ಎಂದು ಲೋಕಸಭೆ(LoP) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 2024ನೇ ಸಾಲಿನ ಕಾಂಗ್ರೆಸ್ ಪ್ರಣಾಳಿಕೆಯ ಬಜೆಟ್ ಇದಾಗಿದೆ. ಹೀಗಾಗಿ ಇದೊಂದು ಕಾಪಿ ಪೇಸ್ಟ್ ಬಜೆಟ್ ಎಂದು ಕಾಲೆಳೆದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಓದಿದ ವಿತ್ ಸಚಿವರು
ಹಣಕಾಸು(Finance Minister) ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಕಾಂಗ್ರೆಸ್ ಪ್ರಣಾಳಿಕೆಯನ್ನು(Manifesto) ಓದಿದ್ದಾರೆ. ಇದರಿಂದಾಗಿ ನನಗೆ ತುಂಬಾ ಖುಷಿಯಾಗಿದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಹಲವು ಯೋಜನೆಗಳನ್ನು ಸಚಿವರು ಬಜೆಟ್ ನಲ್ಲಿ ನಕಲು ಮಾಡಿದ್ದಾರೆ. ಈ ಕುರಿತು ನಾನು ಪಟ್ಟಿ ಮಾಡುತ್ತೇನೆ ಎಂದಿದ್ದಾರೆ.