ಪ್ರಜಾಸ್ತ್ರ ಸುದ್ದಿ
ಕೊಚ್ಚಿ(Kochi): ಅತ್ಯಾಚಾರ ಪ್ರಕರಣದಲ್ಲಿ(Rape Case) ಸಿಲುಕಿಹಾಕಿಕೊಂಡಿರುವ ಮಲಯಾಳ ನಟ ನಿವಿನ್ ಪೋಳಿ ವಿರುದ್ಧ ಕೇರಳ ಪೊಲೀಸರು ಎಫ್ಐಆರ್(FIR) ದಾಖಲಿಸಿದ್ದಾರೆ. ಹೀಗಾಗಿ ಈ ಬಗ್ಗೆ ನಟ ನಿವಿನ್ ಸಾಕಷ್ಟು ಸಂಕಟ ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅವರಿಗೆ ಸಮಾಧಾನ ವಿಚಾರ ತಿಳಿದು ಬಂದಿದ್ದು, ಈ ಪ್ರಕರಣದಲ್ಲಿ ನಟ ನಿವಿನ್ ಪೋಳಿ ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ.
ಬುಧವಾರ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಸ್ಥಳೀಯ ನ್ಯಾಯಾಲಕ್ಕೆ ವರದಿ ಸಲ್ಲಿಸಿದ್ದು, ಇದರಲ್ಲಿ ನಟ ನಿವಿನ್ ಪೋಳಿ ಹೆಸರು ಬಿಟ್ಟು ಉಳಿದ ಆರೋಪಿಗಳ ಹೆಸರು ವರದಿಯಲ್ಲಿದೆ. ವರ್ಷದ ಹಿಂದೆ ದುಬೈನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ನಟ ನಿವಿನ್(Nivin Pauly) ವಿರುದ್ಧ ದೂರು ಸಲ್ಲಿಸಿದ್ದಳು. ಪೊಲೀಸ್ ತನಿಖೆ ವೇಳೆ ನಿವಿನ್ ಪಾತ್ರವಿಲ್ಲವೆಂದು ತಿಳಿದಿದೆ. ಘಟನೆ ನಡೆದ ಸ್ಥಳ, ಸಮಯದಲ್ಲಿ ನಟ ನಿವಿನ್ ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.