ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 2002ರಲ್ಲಿ ಗುಜರಾತಿನ(Gujarat) ಗೋಧ್ರಾದಲ್ಲಿ ನಡೆದ ಸಾಬರಮತಿ ಎಕ್ಸ್ ಪ್ರೆಸ್ ರೈಲಿ ಬೋಗಿಗೆ ಬೆಂಕಿ ಹೊತ್ತಿದ ಘಟನೆ ಆಧರಿತ ‘ದಿ ಸಾಬರಮತಿ ರಿಪೋರ್ಟ್’(The Sabarmati Report) ಸಿನಿಮಾ ನವೆಂಬರ್ 15ರಂದು ರಿಲೀಸ್ ಆಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಅಲೋಕ್ ಭಟ್ ಎಂಬುವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬರಹವನ್ನು ಹಂಚಿಕೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸತ್ಯ ಹೊರಬರುವುದು ಒಳ್ಳೆಯದು. ಜನಸಾಮಾನ್ಯರು ಇದನ್ನು ನೋಡುತ್ತಿರುವುದು ಇನ್ನೂ ಒಳ್ಳೆಯದು. ಸುಳ್ಳಿಗೆ ಆಯಸ್ಸು ಕಡಿಮೆ. ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು ಅಂತಾ ಬರೆದಿದ್ದಾರೆ.
ದಿ ಸಾಬರಮತಿ ರಿಪೋರ್ಟ್ ಸಿನಿಮಾವನ್ನು ಧೀರಜ್ ಸರ್ನಾ ನಿರ್ದೇಶನ ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ 1.69 ಕೋಟಿಗೂ ಹೆಚ್ಚಿಗೆ ಲಾಭ ಮಾಡಿದೆ. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಸಾಬರಮತಿ ಎಕ್ಸ್ ಪ್ರೆಸ್ ರೈಲು ಗುಜರಾತಿನ ಗೋಧ್ರಾದಲ್ಲಿ ಬಂದಾಗ ಫೆಬ್ರವರಿ 7, 2002ರಲ್ಲಿ ಬೆಂಕಿ ಹಚ್ಚಲಾಗಿತ್ತು. ಈ ವೇಳೆ 59 ಕರಸೇವಕರು ಮೃತಪಟ್ಟರು. ಇದು ದೊಡ್ಡ ಕೋಮುಗಲಭೆಗೆ ಕಾರಣವಾಯ್ತು. ಹೀಗಾಗಿ ಅಂದು ಗುಜರಾತಿನಲ್ಲಿ 1,200ಕ್ಕೂ ಜನರು ಹತ್ಯೆ ಮಾಡಲಾಗಿದೆ. ಹೀಗಾಗಿ ಇದನ್ನು ಗೋಧ್ರಾ(Godhra) ಹತ್ಯಾಕಾಂಡ ಎಂದು ಕರೆಯಲಾಗುತ್ತೆ.