ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮುಡಾ(MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್.ವಿ(RV Deshpande) ದೇಶಪಾಂಡೆ, ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲ. ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುವವರು ದಾಖಲೆ ಕೊಟ್ಟರೆ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು. ಸಿಎಂ(CM) ಆಗುವ ಆಸೆ ಇದ್ಯಾ ಎಂದು ಮಾಧ್ಯಮದವರು ಕೇಳಿದಾಗ, ನಾನು ಸಚಿವನಾಗಿ ದಣಿದಿದ್ದೇನೆ. ಇನ್ನೇನಿದ್ದರೂ ಸಿಎಂ ಆಗಬೇಕು. ಹೈಕಮಾಂಡ್ ಒಪ್ಪಿದರೆ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುವ ಆಸೆ ಇದೆ. ಜೀವನದಲ್ಲಿ ಮಹತ್ವಕಾಂಕ್ಷೆ ಇರಬೇಕು ಎಂದಿದ್ದಾರೆ.
ಸಿದ್ದರಾಮಯ್ಯನವರಿಗಿಂತ ನಾನು 2 ವರ್ಷ ದೊಡ್ಡವನು. ಅವರು ನಾವು ಒಳ್ಳೆಯ ಸ್ನೇಹಿತರು. ಅವರೆ 5 ವರ್ಷ ಸಿಎಂ ಆಗಿರ್ತಾರೆ. ಸಿಎಂ ಬದಲಾವಣೆ ಚರ್ಚೆಯಿಲ್ಲ. ನನಗೆ ಗೊತ್ತಿಲ್ಲದೆ ಯಾವುದೇ ಚರ್ಚೆ ನಡೆಯಲ್ಲ. ಜಾರಕಿಹೊಳಿ ಮನೆಯಲ್ಲಿ ಪರಮೇಶ್ವರ್ ಇಲಾಖೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದಿದ್ದಾರೆ.
ಮುಡಾ ಪ್ರಕರಣದ ಬಳಿಕ ಸಿಎಂ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಆದರೆ, ಕೈ ನಾಯಕರು ಅದ್ಯಾವುದೂ ಇಲ್ಲವೆಂದು ಹೇಳುತ್ತಲೇ ಇದ್ದಾರೆ. ಆದರೆ ಸಿಎಂ ರೇಸ್ ನಲ್ಲಿ ಡಿ.ಕೆ ಶಿವಕುಮಾರ್, ಜಿ.ಪರಮೇಶ್ವರ್, ಸತೀಶ್ ಜಾರಿಹೊಳಿ, ಎಂ.ಬಿ ಪಾಟೀಲ, ಈಗ ಆರ್.ವಿ ದೇಶಪಾಂಡೆ ಸೇರಿದಂತೆ ದೊಡ್ಡ ಲಿಸ್ಟ್ ಇದೆ. ಸಧ್ಯ ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಕರಣ ಕೋರ್ಟ್ ಅಂಗಳದಲ್ಲಿದೆ. ಅಲ್ಲಿಂದ ಯಾವ ತೀರ್ಪು ಬರುತ್ತೆ ಎನ್ನುವುದರ ಮೇಲೆ ರಾಜಕೀಯ ಬದಲಾವಣೆಯ ಚಿತ್ರಣ ಸಿಗಲಿದೆ.