ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಂದೇ ಮಾತರಂ ಕುರಿತು ಚರ್ಚೆಗೆ 10 ಗಂಟೆ ಮೀಸಲು ಇಡಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಬ್ರಿಟಿಷರ ದಬ್ಬಾಳಿಕೆಯ ನಡುವೆಯೂ ಬಂಡೆಯಂತೆ ನಿಂತು ಪ್ರೇರಣೆ ನೀಡಿತು. ಈ ಗೀತೆಗೆ 50 ವರ್ಷ ಪೂರೈಸಿದಾಗ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. 100 ವರ್ಷ ಪೂರೈಸಿದಾಗ ತುರ್ತು ಪರಿಸ್ಥಿತಿಯಲ್ಲಿತ್ತು ಎಂದು ಕಿಡಿ ಕಾರಿದರು.
ವಂದೇ ಮಾತರಂ ಗೀತೆ ಮುಸ್ಲಿಂರನ್ನು ಕೆರಳಿಸುತ್ತದೆ ಎಂದು ಜಿನ್ನಾ ಹೇಳಿದರು. ಆಗ ನೆಹರು ಪರಿಶೀಲನೆ ಮಾಡಲು ಹೇಳಿದರು. ಈ ಹಾಡಿಗೆ ವಿರೋಧಿಸಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿ ನೀಡಿದ ಹಾಡಿಗೆ 150 ತುಂಬಿದ ಸಂದರ್ಭದಲ್ಲಿ ಅದರ ವೈಭವನ್ನು ಸ್ಥಾಪಿಸಲು ಅವಕಾಶ ಬಂದಿದೆ. ವಂದೇ ಮಾತರಂ ಸಂಸತ್ತಿನಲ್ಲಿ ಸ್ಮರಿಸುವುದು ನಮ್ಮ ಸೌಭಾಗ್ಯ. 1905ರಲ್ಲಿ ಬ್ರಿಟಿಷರ ಬಂಗಾಳವನ್ನು ವಿಭಜಿಸಿದರು. ಆದರೆ, ಬಂಕಿಮ ಚಂದ್ರ ಚಟ್ಟೋಪಾಧ್ಯಯ ಅವರು ವಂದೇ ಮಾತರಂ ಮೂಲಕ ಬ್ರಿಟಿಷರ ಸವಾಲಿಗೆ ಹೆಚ್ಚಿನ ಶಕ್ತಿ ಹಾಗೂ ಸಂಕಲ್ಪದಿಂದ ಉತ್ತರಿಸಿದರು ಅಂತಾ ಹೇಳಿದರು.




