ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಚಿವ ಲಕ್ಷ್ಮಿ ಹೆಬ್ಬಾಳ್ಕರಗೆ ಅಗೌರವದ ಪದ ಬಳಿಸಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ವಿರುದ್ಧ ಕೇಸ್ ಆಗಿದೆ. ಪೊಲೀಸ್ ಠಾಣೆ, ಕೋರ್ಟ್ ಸಹ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಿ.ಟಿ ರವಿ ಉಳಿದಿದ್ದೆ ಪುಣ್ಯ. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಡಿಸಿಎಂ ವಿರುದ್ಧ ಕಂಡಾಮಂಡಲವಾಗಿದೆ.
ನೀವು ಜವಾಬ್ದಾರಿ ಉಪ ಮುಖ್ಯಮಂತ್ರಿಯೋ? ರೌಡಿ ಗ್ಯಾಂಗ್ ನ ಮುಖ್ಯಸ್ಥನೋ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪ ಮುಖ್ಯಮಂತ್ರಿ! ರೌಡಿ ಕತ್ವಾಲ್ ನ ಶಿಷ್ಯ ಡಿ.ಕೆ ಶಿವಕುಮಾರ್ ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡುರುವ ನೀನು ರಾಜಕಾರಣಿಯೋ? ರೌಡಿಯೋ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.