ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕನ್ನಡ ಬರಲ್ಲ ಎಂದು ವಿದ್ಯಾರ್ಥಿಯೊಬ್ಬ ಹೇಳಿದ ವಿಚಾರ ತೀವ್ರ ಚರ್ಚೆ ಹುಟ್ಟು ಹಾಕಿದೆ. ಆನ್ಲೈನ್ ಮೂಲಕ ನೀಟ್ ಕೋಚಿಂಗ್ ಉದ್ಘಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರ ಬಗ್ಗೆ ಈ ಹೇಳಿದ ಆಡಿಯೋ ವೈರಲ್ ಆಗಿದೆ. ಇದರಿಂದಾಗಿ ಸಚಿವರು ಗರಂ ಆಗಿ ಹಾಗೇ ಹೇಳಿದ ವಿದ್ಯಾರ್ಥಿ ಯಾರೆಂದು ಪತ್ತೆ ಮಾಡಿ ಎಂದಿದ್ದಾರೆ.
ಆನ್ಲೈನ್ ಸಂವಾದ ಮೂಲಕ ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಯಾರೋ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಅವರು ಸಿಟ್ಟಾಗಿದ್ದಾರೆ. ಈಗ ನಾನು ಮಾತನಾಡುತ್ತಿರುವುದು ಕನ್ನಡನಾ ಅಥವ ಉರ್ದುನಾ ಎಂದು ಪ್ರಶ್ನಿಸಿದ್ದಾರೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೇ ಹೇಳಿದ ವಿದ್ಯಾರ್ಥಿ ಯಾರೆಂದು ಪತ್ತೆ ಮಾಡಿ ಅಂತ ಸೂಚಿಸಿದ್ದಾರೆ. ಹೀಗಾಗಿ ಆ ವಿದ್ಯಾರ್ಥಿಯ ಹುಡುಕಾಟ ನಡೆದಿದೆ.