ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru):(ಮಾಹಿತಿ: ಕೇಂದ್ರ ಚುನಾವಣಾ ಆಯೋಗ): ನೆರೆಯ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ(Result) ಸಹ ಇಂದು ಪ್ರಕಟವಾಗುತ್ತಿದೆ. ಮುಂಜಾನೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ನಡೆದಿದೆ. ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿವೆ. ಜಾರ್ಖಂಡ್ ನಲ್ಲಿ 81 ಕ್ಷೇತ್ರಗಳಿವೆ. ಇವುಗಳಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಯಾವ ಪಕ್ಷಗಳು ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ ಎನ್ನುವ ಅಂಕಿ ಅಂಶ ಇಲ್ಲಿದೆ ನೋಡಿ.
ಮಹಾರಾಷ್ಟ್ರದಲ್ಲಿ ಬಿಜೆಪಿ 75, ಶಿವಸೇನೆ(ಏಕನಾಥ್ ಸಿಂಧೆ ಬಣ) 42, ಎನ್ ಸಿಪಿ(ಅಜಿತ್ ಪವಾರ್ ಬಣ) 28, ಎನ್ ಸಿಪಿ(ಶರದ್ ಪವಾರ್ ಬಣ) 19, ಕಾಂಗ್ರೆಸ್ 15, ಶಿವಸೇನೆ(ಉದ್ಧವ್ ಠಾಕ್ರೆ ಬಣ) 15, ಜೆಎಸ್ಎಸ್ 2, ಪಿಡಬ್ಲುಪಿಐ 2, ರಾಷ್ಟ್ರೀಯ ಯುವ ಸ್ವಾಭಿಮಾನ ಪಕ್ಷ 1, ಸ್ವತಂತ್ರ ಭಾರತ್ ಪಕ್ಷ 1, ಎಐಎಂಐಎಂ 1, ಇಂಡಿಯನ್ ಸೆಕ್ಯೂಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಇನ್ನು ಜಾರ್ಖಂಡ್ ನಲ್ಲಿ ಬಿಜೆಪಿ 17, ಜೆಎಂಎಂ 13, ಕಾಂಗ್ರೆಸ್ 9, ಆರ್ ಜೆಡಿ 4, ಸಿಪಿಐ(ಎಂಎಲ್) 3 ಎಜೆಎಸ್ ಯುಪಿ 2, ಜೆಎಲ್ ಕೆಂ 2 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಇದೆ. ಇನ್ನು ದೇಶದ ವಿವಿಧ ರಾಜ್ಯಗಳ 48 ವಿಧಾನಸಭೆ ಹಾಗೂ 2 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸಹ ಪ್ರಕಟಗೊಳ್ಳುತ್ತಿದೆ.