ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಬರೋಬ್ಬರಿ 5 ಕೋಟಿ( Five Crore Rupees) ರೂಪಾಯಿ ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡ ನೋಟುಗಳು ಹಳೆಯದಾಗಿವೆ. ನೋಟು ಬ್ಯಾನ್ ಗೂ ಪೂರ್ವದಲ್ಲಿದ್ದ ನೋಟುಗಳಿವು. ಹೀಗಾಗಿ ಇವುಗಳನ್ನು ಸುಡಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಬೇಕಿದೆ. ಈ ಕಾರಣಕ್ಕೆ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡ 5 ಕೋಟಿ ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಆರ್ ಬಿಐ(RBI) ನೀಡಲು ಹೋದರೆ ಅವರು ಪಡೆಯಲು ಬರುವುದಿಲ್ಲವೆಂದು ಹೇಳಿದ್ದಾರೆ. ಯಾಕಂದರೆ, ಹಳೆಯ 500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು(Note Ban) ಬ್ಯಾನ್ ಮಾಡಿದ ಸಂದರ್ಭದಲ್ಲಿ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಸಮಯ ಮುಗಿದಿದೆ. ಈಗ ಇವುಗಳನ್ನು ಬ್ಯಾಂಕಿನವರು ಡೆಪಾಸಿಟ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಪೊಲೀಸರು ನೋಟುಗಳನ್ನು ಸುಡುವ ತೀರ್ಮಾನಕ್ಕೆ ಬಂದಿದ್ದು, ಕೋರ್ಟ್ ಅನುಮತಿ ಕೇಳಿದ್ದಾರೆ.