ಪ್ರಜಾಸ್ತ್ರ ಸುದ್ದಿ
ಯಾದಗಿರಿ(Yadagiri): ತನ್ನ ಎಕ್ಸ್ ಖಾತೆತಲ್ಲಿ ತಲ್ವಾರ್ ಫೋಟೋ ಅಪ್ ಲೋಡ್ ಮಾಡಿ ಪೊಲೀಸರಿಗೆ ಯುವಕನೊಬ್ಬ ಧಮ್ಕಿ ಹಾಕಿರುವ ಘಟನೆ ಜಿಲ್ಲೆಯ ಕೊಡೇಕಲ್ ದಲ್ಲಿ ನಡೆದಿದೆ. ಶರೀಫ್ ಎನ್ನುವ ವ್ಯಕ್ತಿ ತಲ್ವಾರ್ ಗಳ ಫೋಟೋ ಹಂಚಿಕೊಂಡು ಇದೆ ತಲ್ವಾರ್ ನಿಂದ ಮರ್ಡರ್(Murder) ಮಾಡತೀನಿ. ಇಲ್ಲ ಎಫ್ಐಆರ್(FIR) ತೊಗೊಳ್ಳಿ ಎಂದು ಬರೆದಿದ್ದಾನೆ. ಈ ರೀತಿ ಆತ ಯಾಕೆ ಹೇಳಿದ್ದ ಅಂದರೆ ತಮ್ಮ ಮನೆಯ ಎಲ್ಲ ದಾಖಲೆಗಳಿದ್ದು, ಮನೆ ಕಟ್ಟುತ್ತಿರುವಾಗ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಕೊಡೇಕಲ್ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಶಾಸಕರ ಪಿಎ ಕಡೆಯಿಂದ ಹೇಳಿಸ್ತಾರ. ಪೊಲೀಸರು ಕೇರ್ ಮಾಡುತ್ತಿಲ್ಲ ಎಂದು ಬರೆದಿದ್ದಾನೆ.
ಇತನ ಪೋಸ್ಟ್ ಗೆ ಬೆಂಗಳೂರು ಸಿಟಿ ಪೊಲೀಸರು ಪ್ರತಿಕ್ರಿಯೆ ನೀಡಿ ಯಾವ ಠಾಣೆ ಎಂದು ಕೇಳಿದ್ದಾರೆ. ಅದಕ್ಕೆ ಆತ ಉತ್ತರಿಸಿ, ದಯವಿಟ್ಟಿ ಕ್ರಮ ಕೈಗೊಳ್ಳಲು ಹೇಳಿ. ಕೊಡೇಕಲ್ ಪೊಲೀಸ್(Police) ಠಾಣೆಯವರಿಗೆ. ನಮ್ಮ ಅಪ್ಪ ಒಂದು ತಿಂಗಳಿಂದ ಪೊಲೀಸ್ ಠಾಣೆ ತಿರುಗಾಡಿದ ಯಾರು ಕೇರ್ ಮಾಡಲ್ಲ ಬಡವರಿಗೆ. ಇಲ್ಲಾ ಅಂದ್ರೆ ನಾನು ನನ್ನ ಕಾನೂನು(ಮರ್ಡರ್) ಉಪಯೋಗ ಮಾಡಬೇಕು ಆಗುತ್ತೆ ಎಂದು ಹೇಳಿದ್ದಾನೆ. ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗಬೇಕಾದವರಿಗೆ ಸಿಗದೆ ಹೋದಾಗ ವ್ಯವಸ್ಥೆಯ ವಿರುದ್ಧ ಯಾವ ರೀತಿ ತಿರುಗಿ ಬೀಳಲು ನೋಡುತ್ತಾರೆ ಅನ್ನೋದಕ್ಕೆ ಇದೊಂದು ಉದಾಹರಣೆ. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡರೆ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದು.