Ad imageAd image

ಮಹಾಯುತಿ ಸರ್ಕಾರದ ಭಾಗವಾಗಲ್ಲವೆಂದು ಶಿಂಧೆ ಹೇಳಿದ್ದೇಕೆ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ(ಏಕನಾಥ್ ಶಿಂಧೆ ಬಣ), ಎನ್ ಸಿಪಿ(ಅಜಿತ್ ಪವಾರ್ ಬಣ) ಬಳದ ಮಹಾಯುತಿ ಮೈತ್ರಿ ಭರ್ಜರಿ ಗೆಲುವು ಸಾಧಿಸಿದೆ.

Nagesh Talawar
ಮಹಾಯುತಿ ಸರ್ಕಾರದ ಭಾಗವಾಗಲ್ಲವೆಂದು ಶಿಂಧೆ ಹೇಳಿದ್ದೇಕೆ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ(ಏಕನಾಥ್ ಶಿಂಧೆ ಬಣ), ಎನ್ ಸಿಪಿ(ಅಜಿತ್ ಪವಾರ್ ಬಣ) ಬಳದ ಮಹಾಯುತಿ ಮೈತ್ರಿ(Mahayuti Alliance) ಭರ್ಜರಿ ಗೆಲುವು ಸಾಧಿಸಿದೆ. 288 ಸ್ಥಾನಗಳಲ್ಲಿ ಬರೋಬ್ಬರಿ 230 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕಳೆದ 10 ದಿನಗಳಿಂದ ಸರ್ಕಾರ ರಚನೆಯ ಬಿಕ್ಕಟ್ಟು ಮುಂದುವರೆದಿದೆ. ಯಾವುದೇ ರೀತಿಯ ಒಪ್ಪಂದಗಳು ಕೂಡಿ ಬರುತ್ತಿಲ್ಲ. ಹೀಗಾಗಿ ನಿಯೋಜಿತ ಸಿಎಂ ಏಕನಾಥ್ ಶಿಂಧೆ ಮಹಾಯುತಿ ಸರ್ಕಾರದ ಭಾಗವಾಗುವುದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ತಮ್ಮ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಹಿಂದುಳಿದವರು, ಮಹಿಳೆಯರು, ಮರಾಠಿಗರು, ಲಾಡ್ಲಿ ಬಹೆನಾ ಯೋಜನೆ, ಮೀಸಲಾತಿ ನಿರ್ಧಾರ ಸೇರಿ ವಿವಿಧ ಕಾರಣಗಳಿಂದ ಮತ ಹಾಕಿದ್ದಾರೆ. ಅಲ್ಲದೆ ತಾವು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಜನ ಮತ ಹಾಕಿದ್ದಾರೆ. ಒಂದು ವೇಳೆ ತಮ್ಮನ್ನು ಸಿಎಂ ಮಾಡದಿದ್ದರೆ ಜನರಿಗೆ ತಪ್ಪು ಸಂದೇಶ ಹೋಗುತ್ತೆ ಎಂದು ಏಕನಾಥ್ ಶಿಂಧೆ ಅಮಿತ್ ಶಾ ಮುಂದೆ ಹೇಳಿದ್ದಾರಂತೆ.

ದೇವೇಂದ್ರ ಫಡ್ನವಿಸ್ ಅವರನ್ನು ಸಿಎಂ ಮಾಡಿದರೆ, ತಮಗೆ ಗೃಹ, ಹಣಕಾಸು, ಕಂದಾಯ ಖಾತೆಗಳನ್ನು ನೀಡಬೇಕು. ತಾವು ಹೇಳಿದವರಿಗೆ ಉಪ ಮುಖ್ಯಮಂತ್ರಿ ಮಾಡಬೇಕು. ಇದರಿಂದ ಸಮತೋಲನ ಕಾಪಾಡಲು ಸಾಧ್ಯವೆಂದು ಹೇಳಿದ್ದಾರಂತೆ. ಈ ಮೂರು ಖಾತೆಗಳನ್ನು ನೀಡದಿದ್ದರೆ ತಾವು ಸರ್ಕಾರದ ಭಾಗವಾಗುವುದಿಲ್ಲ. ಹೊರಗಿನಿಂದ ಬೆಂಬಲ ನೀಡುತ್ತೇವೆ. ನಮ್ಮ 7 ಜನ ಸಂಸದರು ಸಹ ಹೊರಗಿನಿಂದ ಪ್ರಧಾನಿ ಮೋದಿಗೆ ಬಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರಂತೆ. ಇದರಿಂದಾಗಿ ಫಲಿತಾಂಶ ಬಂದು 10 ದಿನವಾದರೂ ಸರ್ಕಾರ ರಚನೆಯ ಸರ್ಕಸ್ ನಡೆದಿದೆ.

WhatsApp Group Join Now
Telegram Group Join Now
Share This Article