Ad imageAd image

ಮುಡಾ ಪ್ರಕರಣ: ಆಸ್ತಿ ಮಾಲೀಕರ ಹೆಸರೇ ಪ್ರಸ್ತಾಪವಾಗಲ್ಲ ಯಾಕೆ?

ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ, ಬಿಜೆಪಿ ಪ್ರತಿಭಟನೆ ಮಾಡುತ್ತಲೇ ಇವೆ. ಇದಕ್ಕೆ ಕೌಂಟರ್ ಆಗಿ

Nagesh Talawar
ಮುಡಾ ಪ್ರಕರಣ: ಆಸ್ತಿ ಮಾಲೀಕರ ಹೆಸರೇ ಪ್ರಸ್ತಾಪವಾಗಲ್ಲ ಯಾಕೆ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ, ಬಿಜೆಪಿ ಪ್ರತಿಭಟನೆ ಮಾಡುತ್ತಲೇ ಇವೆ. ಇದಕ್ಕೆ ಕೌಂಟರ್ ಆಗಿ ಆಡಳಿತರೂಢ ಕಾಂಗ್ರೆಸ್ ಸಹ ಸಮಾವೇಶ ನಡೆಯುತ್ತಿದೆ. ಮುಡಾ ಪ್ರಕರಣದಲ್ಲಿ ಬರೀ ಕಾಂಗ್ರೆಸ್ ನಾಯಕರಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಹೆಸರುಗಳು ಸಹ ಕೇಳಿ ಬಂದಿವೆ. ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತ್ರ ಮೂರು ಖಾಸಗಿ ದೂರು ದಾಖಲಾಗಿವೆ. ಅದು ರಾಜಕೀಯ ಷಡ್ಯಂತ್ರದಿಂದ ಎಂದು ಕಾಂಗ್ರೆಸ್ ನಾಯಕರು ಕಿಡಿ ಕಾರುತ್ತಿದ್ದಾರೆ.

ಈ ಎಲ್ಲ ರಾಜಕೀಯ, ಕಾನೂನು ಹೋರಾಟ, ಪ್ರತಿಭಟನೆ ನಡುವೆ ಸಹಜವಾಗಿ ಎಲ್ಲರಲ್ಲಿ ಮೂಡುತ್ತಿರುವ ಪ್ರಶ್ನೆ, ಸ್ವತಃ ಸಿಎಂ ಸಿದ್ದರಾಮಯ್ಯನವರು ಹೇಳಿರುವಂತೆ ತಮ್ಮ ಪತ್ನಿಗೆ ಅವರ ಸಹೋದರ ಅರಿಶಿಣ ಕುಂಕುಮ ರೀತಿಯಲ್ಲಿ ಉಡುಗರೆಯಾಗಿ ಕೊಟ್ಟಿರುವುದು. ಆ ಜಾಗ ನಮಗೆ ಹೇಳದೆ ಕೇಳದೆ ಪಡೆದ ಮುಡಾ 50:50 ಅನುಪಾತದಲ್ಲಿ ಸೈಟ್ ಗಳನ್ನು ನೀಡಿದೆ. ನಮಗೆ ಇದೆ ಜಾಗದಲ್ಲಿ ಕೊಡಿ ಎಂದು ನಾವು ಕೇಳಿ ಎಂದು. ಆದರೆ, ಇದುವರೆಗೂ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಾಗಲಿ, ಇವರಿಗೆ ಉಡುಗರೆ ನೀಡಿದ ಸಹೋದರನ ವಿಚಾರವಾಗಲಿ ಪ್ರಸ್ತಾಪವೇ ಆಗುತ್ತಿಲ್ಲ. ಇವರಿಂದ ಇದುವರೆಗೂ ಒಂದೇ ಒಂದು ಹೇಳಿಕೆ ಬಂದಿಲ್ಲ. ದೃಶ್ಯ ಮಾಧ್ಯಮಗಳಲ್ಲಿಯೂ ಬರೀ ಸಿದ್ದರಾಮಯ್ಯನವರ ಹೆಸರಿನ ಮೇಲೆ ಚರ್ಚೆ. ಇಂತಲ್ಲೆ ಜಾಗ ಕೊಡಿ ಎಂದು ಹೇಳಿದ್ದಾರೆ ಎನ್ನುವ ಆರೋಪ, ದೂರಿನ ಮೇಲೆ ಪ್ರಾಸಿಕ್ಯೂಷನ್ ಗೆ ಕೊಡಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

ಆಸ್ತಿ ಯಾರ ಹೆಸರಿನಲ್ಲಿತ್ತು. ಯಾರು, ಯಾವಾಗ ಖರೀದಿ ಮಾಡಿದರು. ಅಲ್ಲಿಂದ ಅದು ಯಾರಿಗೆ ವರ್ಗವಾಯ್ತು. ಮುಡಾದಲ್ಲಿ ತಪ್ಪು ಇರುವುದಾ..? ಬದಲಿ ನಿವೇಶನವನ್ನು ಇಂತಹ ಜಾಗದಲ್ಲಿಯೇ ಕೊಡಬೇಕು ಎಂದು ಹೇಳಿರುವುದಕ್ಕೆ ಇರುವ ದಾಖಲೆಗಳೇನು ಎನ್ನುವುದು ಸೇರಿದಂತೆ ಅನೇಕ ವಿಚಾರಗಳು ಅದಾಗಲೇ ಎಲ್ಲಡೆ ಪ್ರಸ್ತಾಪವಾಗಿದೆ. ಆದರೆ, ಆಸ್ತಿಯ ಮಾಲೀಕರನ್ನು ಹೊರತು ಪಡಿಸಿ, ಅವರ ಪತಿ ಸಿಎಂ ಆಗಿದ್ದಾರೆ. ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದರು. ಪ್ರಭಾವ ಬಳಸಿ ನಿವೇಶನವನ್ನು ಇಂತಹದ್ದೆ ಪ್ರದೇಶದಲ್ಲಿ ಪಡೆದಿದ್ದಾರೆ ಎಂದು ದೂರು ಸಲ್ಲಿಕೆಯಾಗಿರುವುದು ಎಷ್ಟು ಸರಿ ಎಂದು ಅವರ ಬೆಂಬಲಿಗರು, ಅಭಿಮಾನಿಗಳು ಕೇಳುತ್ತಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಸಿಎಂ ಪತ್ನಿ:

ಸಿದ್ದರಾಮಯ್ಯನವರು ರಾಜಕೀಯ ಜೀವನದಲ್ಲಿದ್ದು ನಾಲ್ಕು ದಶಕಗಳು ಮೇಲಾಗಿದೆ. ಸಚಿವರು, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿಯಾದರು ಅವರ ಪತ್ನಿ ಪಾರ್ವತಿಯವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸ್ವತಃ ಸಿಎಂ ಅವರೆ ಹೇಳಿದ್ದಂತೆ ಅವರ ಅದೆಷ್ಟೋ ಸಹದ್ಯೋಗಿಗಳಿಗೂ ಅವರ ಮುಖ ಪರಿಚಯವಿಲ್ಲವಂತೆ. ಇವತ್ತಿನ ಪ್ರಚಾರದ ಹಪಾಹಪಿತನದಲ್ಲಿಯೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವವರ ಪತ್ನಿ ಎಂದಿಗೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳದೆ ಇರುವುದು ಸೋಜಿಗವೇ ಸರಿ! ಗೂಗಲ್ ನಲ್ಲಿಯೂ ಸಹ ಸಿದ್ದರಾಮಯ್ಯನವರ ಜೊತೆಗಿನ ಹಳೆಯ ಎರಡ್ಮೂರು ಫೋಟೋ ಬಿಟ್ಟರೆ ಬೇರೆ ಯಾವ ಫೋಟೋ ಸಹ ಕಾಣಿಸುವುದಿಲ್ಲ. ಇಂತವರು ನಾಳೆ ಮುಡಾ ಪ್ರಕರಣದ ತನಿಖೆ ಶುರುವಾದ್ಮೇಲೆ ತನಿಖಾಧಿಕಾರಿಗಳ ಎದುರು ಹಾಜರಾಗುವ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.

WhatsApp Group Join Now
Telegram Group Join Now
Share This Article