ಪ್ರಜಾಸ್ತ್ರ ಸುದ್ದಿ
ಮೂಲ್ಕಿ(Mulki): ಪತ್ನಿ ಹಾಗೂ ಮಗುವನ್ನು ಕೊಂದು ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ತಾಲೂಕಿನ ಮೂಲ್ಕಿಯಲ್ಲಿ ನಡೆದಿದೆ. ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ಹಳೆಯಂಗಡಿ ಹತ್ತಿರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಪ್ರಿಯಾಂಕಾ(28) ಹಾಗೂ ಮಗ ಹೃದಯ(04) ಇವರಿಗೆ ವಿಷ ಕೊಟ್ಟು ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಪಕ್ಷಿಕೆರೆ ಮುಖ್ಯಜಂಕ್ಷನ್ ಹತ್ತಿರ ಹೆತ್ತವರೊಂದಿಗೆ ಕಾರ್ತಿಕ್ ಹೋಟೆಲ್ ನಡೆಸುತ್ತಿದ್ದ. ಇದರ ಸಮೀಪದಲ್ಲಿನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಶಿವಮೊಗ್ಗ ಮೂಲದ ಪ್ರಿಯಾಂಕಾಳನ್ನು ಮದುವೆ ಮಾಡಿಕೊಂಡಿದ್ದ ಕಾರ್ತಿಕ್ ದಂಪತಿಗೆ 4 ವರ್ಷದ ಗುಂಡು ಮಗುವಿತ್ತು. ಅವರಿಬ್ಬರನ್ನು ಕೊಂದು ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಘಟನೆಯಿಂದ ಸುತ್ತಲಿನ ಭಾಗದ ಜನರಿಗೆ ದಿಗ್ ಭ್ರಮೆ ಆಗಿದೆ.