ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತಿಯನ್ನೇ ಪತ್ನಿ ಹತ್ಯೆ(Murder) ಮಾಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಭಾವನಸವದತ್ತಿ ಗ್ರಾಮದಲ್ಲಿ ನಡೆದಿದೆ. ಮಚ್ಚೇಂದ್ರ ಓಲೇಕಾರ(45) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇತನ ಪತ್ನಿ ಸಿದ್ದವ್ವ ಹಾಗೂ ಪ್ರಿಯಕರ ಗಣಪತಿ ಕಾಂಬಳೆ ಕೊಲೆ ಆರೋಪಿಗಳು. ಪೊಲೀಸರ ವಶದಲ್ಲಿರುವ ಆರೋಪಿಗಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಕೃಷ್ಣಾ ನದಿಗೆ(Krishna River) ಗಂಡನ್ನು ಸಿದ್ದವ್ವ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಆತ ಸ್ನಾನ ಮಾಡುತ್ತಿದ್ದಾಗ ಪ್ರಿಯಕರ ಗಣಪತಿ ಜೊತೆಗೆ ಸೇರಿಕೊಂಡು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ನದಿಯಲ್ಲಿಯೇ ಶವ ಬಿಸಾಕಿ ಪರಾರಿಯಾಗಿದ್ದಾರೆ. ಮರುದಿನ ಶವವನ್ನು ನದಿಯಲ್ಲಿ ನೋಡಿದ ಸ್ಥಳೀಯರು ಪೊಲೀಸರಿಗೆ(Police) ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಹತ್ಯೆಯಾದ ಮಚ್ಚೇಂದ್ರ ಪತ್ನಿ ಹಾಗೂ ಪ್ರಿಯಕರ ಕೊಲೆ ಆರೋಪಿಗಳು ಎಂದು ತಿಳಿದಿದೆ. ಇದೀಗ ಇಬ್ಬರು ಕಂಬಿ ಹಿಂದೆ ಸೇರಿದ್ದಾರೆ.