ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಪ್ರೇಮಿಯೊಂದಿಗೆ ಪತ್ನಿ ಪರಾರಿಯಾಗಿದ್ದು, ಪತಿ ಹಾಗೂ ಸೋದರಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗುಮ್ಮನೂರು ಗ್ರಾಮದ ಹರೀಶ್(30) ಹಾಗೂ ಆನೆಕೊಂಡದ ನಿವಾಸಿ ರುದ್ರೇಶ್(36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರೀಶ್ ಹಾಗೂ ಹುಲ್ಲಿಕಟ್ಟೆ ಗ್ರಾಮದ ಸರಸ್ವತಿ ಜೊತೆಗೆ 3 ತಿಂಗಳ ಹಿಂದೆ ಮದುವೆಯಾಗಿದ್ದರು. ಜನವರಿ 23ರಂದು ಸರಸ್ವತಿ ಪ್ರೀಯಕರನೊಂದಿಗೆ ಪರಾರಿಯಾಗಿದ್ದು, ಜನವರಿ 25ರಂದು ಪತ್ತೆಯಾಗಿದ್ದರು. ಘಟನೆಯಿಂದ ಮನನೊಂದು ಸೋಮವಾರ ನೇಣು ಹಾಕಿಕೊಂಡು ಪತಿ ಹರೀಶ್ ಮೃತಪಟ್ಟರೆ, ಅಳಿಯನ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದ ಸೋದರಮಾವ ರುದ್ರೇಶ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಮಂಗಳವಾರ ಮೃತಪಟ್ಟಿದ್ದಾರೆ.
ಡೆತ್ ನೋಟ್ ಸಹ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಹರೀಶ್, ಪ್ರಿಯಕರನೊಂದಿಗೆ ಪತ್ನಿ ಸರಸ್ವತಿ ಓಡಿ ಹೋಗಿದ್ದರೂ, ನಾನು ಕಿರುಕುಳ ಕೊಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ. ಪತ್ನಿ, ಆಕೆಯ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆಯಾಗಲಿ. ನಾನು ಬಹಳ ನೊಂದಿದ್ದೇನೆ ಎಂದು ಬರೆದಿದೆಯಂತೆ. ಮೃತನ ಕುಟುಂಬಸ್ಥರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




