ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmadab): ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲಾರ್ಧ ದಿನದಲ್ಲಿಯೇ ಪ್ರವಾಸಿ ವೆಂಡೀಸ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಟಾಸ್ ಗೆದ್ದ ವೆಸ್ಟ್ ವಿಂಡೀಸ್ ತಂಡದ ನಾಯಕ ರೋಸ್ಟನ್ ಚೆಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ಲೆಕ್ಕಾಚಾರವನ್ನು ಭಾರತದ ಬೌಲರ್ ಗಳು ಉಲ್ಟಾ ಮಾಡಿದರು. ಹೀಗಾಗಿ ಕೇವಲ 162 ರನ್ ಗಳಿಗೆ ಆಲೌಟ್ ಆಗಿದ್ದಾರೆ.
ಜಸ್ಟನ್ ಗ್ರೇವಸ್ 32, ಹೋಪ್ 26, ನಾಯಕ ರೋಸ್ಟನ್ 24 ರನ್ ಗರಿಷ್ಟ ಆಗಿದೆ. ಮೊಹಮ್ಮದ್ ಸಿರಾಜ್ 4, ಜಸ್ಪ್ರೀತ್ ಬೂಮ್ರಾ 3 ವಿಕೆಟ್ ಕಿತ್ತು ಪ್ರವಾಸಿ ತಂಡಕ್ಕೆ ಶಾಕ್ ನೀಡಿದರು. ಕುಲ್ದೀಪ್ ಯಾದವ್ 2, ವಾಸಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು. ಭಾರತ ಬ್ಯಾಟಿಂಗ್ ಆರಂಭಿಸಿದೆ.