ಪ್ರಜಾಸ್ತ್ರ ಸುದ್ದಿ
ವೆಸ್ಟ್ ವಿಂಡೀಸ್(West Indies) ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಡ್ವೇನ್(Dwayne Bravo) ಬ್ರಾವೋ ತಮ್ಮ 21 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 40 ವರ್ಷದ ಬ್ರಾವೋ ತಮ್ಮ ನಿವೃತ್ತಿಯನ್ನು ಈ ಹಿಂದೆಯೇ ಘೋಷಿಸಬೇಕಾಗಿತ್ತು. ಆದರೆ, ಅವರಿಗೆ ಬೀಳ್ಕೊಡುಗೆ ಪಂದ್ಯಗಳನ್ನು ಆಯೋಜಿಸುವ ಸಂದರ್ಭದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಆದರೆ, ಈಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ನಿವೃತ್ತಿ(Retirement) ವಿಚಾರ ತಿಳಿಸಿದ್ದಾರೆ.
164 ಏಕದಿನ(ODI) ಪಂದ್ಯಗಳನ್ನಾಡಿದ್ದು 2,968 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ, 10 ಅರ್ಧಶತಕಗಳಿವೆ. 40 ಟೆಸ್ಟ್(Test Match) ಪಂದ್ಯಗಳಿಂದ 2,200 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 13 ಅರ್ಧಶತಕ ಬಾರಿಸಿದ್ದಾರೆ. 91 ಟಿ-20(T-20) ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ನಲ್ಲಿ 86 ವಿಕೆಟ್, ಏಕದಿನ ಪಂದ್ಯಗಳಲ್ಲಿ 199 ವಿಕೆಟ್ ಗಳನ್ನು ಪಡೆದಿದ್ದಾರೆ. ಆಲ್ ರೌಂಡರ್ ಆಟಗಾರನಾಗಿರುವ ಬ್ರಾವೋ ವಿವಿಧ ಲೀಗ್ ಪಂದ್ಯಗಳಲ್ಲಿಯೂ ಆಡಿ ಮಿಂಚಿದ್ದಾರೆ.