ಮಹಿಳಾ ಮೀಸಲಾತಿ, 21 ನಗರಗಳಲ್ಲಿ ಕಾಂಗ್ರೆಸ್ ಮಾಧ್ಯಮಗೋಷ್ಠಿ

163

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜಕೀಯದಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಮಸೂದೆಯ ಅಸಲಿಯತ್ತನ್ನು ಹೇಳುತ್ತೇವೆ ಎಂದು ಕಾಂಗ್ರೆಸ್ ದೇಶದ 21 ನಗರಗಳಲ್ಲಿ ಏಕಕಾಲದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸುತ್ತಿದೆ.

ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ಮಾಡುತ್ತಿರುವ ದ್ರೋಹದ ಬಗ್ಗೆ ಹೇಳಲಾಗುವುದು ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ತಿಳಿಸಲಾಗಿದೆ. ಯಾವ ಯಾವ ನಗರದಲ್ಲಿ ಯಾವೆಲ್ಲ ಮಹಿಳಾ ನಾಯಕಿಯರು ಮಾಧ್ಯಮಗೋಷ್ಠಿ ನಡೆಸುತ್ತಾರೆ ಅನ್ನೋ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ.
error: Content is protected !!