ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಹರಾಜು ಪ್ರಕ್ರಿಯೆಗೂ ಮುನ್ನವೆ ಮಹಿಳಾ ಪ್ರೇಮಿಯರ್ ಲೀಗ್-2026ರ ಟೂರ್ನಿಯ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 9ರಿಂದ ಫೆಬ್ರವರಿ 5ರ ತನಕ 4ನೇ ಆವೃತ್ತಿಯ ಪಂದ್ಯಗಳು ನಡೆಯಲಿವೆ. ನವಿ ಮುಂಬೈ ಹಾಗೂ ಗುಜರಾತಿನ ವಡೋದರದಲ್ಲಿ ಪಂದ್ಯಗಳು ನಡೆಯಲಿವೆ.
ಉದ್ಘಾಟನಾ ಪಂದ್ಯ ಸೇರಿ ಮೊದಲಾರ್ಧ ಪಂದ್ಯಗಳು ನವಿ ಮುಂಬೈನ ಡಿ.ವೈ ಪಾಟೀಲ ಮೈದಾನದಲ್ಲಿ ನಡೆಯಲಿವೆ. ಇಂದು ನವದೆಹಲಿಯಲ್ಲಿ ಹರಾಜು ನಡೆಯುತ್ತಿದೆ. ಫೆಬ್ರವರಿ 7ರಿಂದ ಪುರುಷರ ಟಿ-20 ವಿಶ್ವಕಪ್ ಟೂರ್ನಿ ಶುರುವಾಗುವ ಹಿನ್ನಲೆಯಲ್ಲಿ ಈ ವರ್ಷ ಬೇಗ ಟೂರ್ನಿ ಶುರು ಮಾಡಲಾಗಿದೆ.




