ಪ್ರಜಾಸ್ತ್ರ ಸುದ್ದಿ
ಮಹಿಳಾ ಟಿ-20 ವಿಶ್ವಕಪ್ ಗೆ(Women t 20 world cup) ಕೆಲವು ದಿನಗಳು ಉಳಿದಿವೆ. ಹೀಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕನ್ನಡತಿ ಶ್ರೇಯಾಂಕಾ(shreyanka patil) ಪಾಟೀಲಗೆ ಸ್ಥಾನ ನೀಡಲಾಗಿದೆ. 15 ಸದಸ್ಯರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಹರ್ಮನ್(harman preet kaur) ಪ್ರೀತ್ ಕೌರ್ ನಾಯಕಿ, ಸ್ಮೃತಿ ಮಂದಾನ(smriti mandhana) ಉಪ ನಾಯಕಿ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲಗೆ ಅವಕಾಶ ಸಿಕ್ಕಿದೆ. ಹೀಗಾಗಿ ಕನ್ನಡಿಗರಿಗೆ ಖುಷಿಯಾಗಿದೆ. ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಮಹಿಳಾ ಆರ್ ಸಿಬಿ ತಂಡ ಕಪ್ ಗೆದ್ದ ಬಳಿಕ ಶ್ರೀಯಾಂಕಾ ಪಾಟೀಲ ಮೇನ್ ಸ್ಟ್ರೀಮ್ ಗೆ ಬಂದರು.
ಶೆಪಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಯಾ ರಾಡಿಗ್ರಾಸ್, ರಿಷಾ ಘೋಷ್, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಕರ್, ರೇಣುಕಾ ಸಿಂಗ್ ಠಾಕೂರ್, ಆರುಂಧತಿ ರೆಡ್ಡಿ, ಆಶಾ ಶೋಭನಾ, ಸಂಜನಾ ಸಂಜೀವನ್, ದಯಾಲನ್ ಹೇಮಲತಾ ಬಳಗವನ್ನು ಆಯ್ಕೆ ಮಾಡಲಾಗಿದೆ. ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಭಾರತ ಆಡಲಿದೆ. ಅಕ್ಟೋಬರ್ 6ರಂದು ಪಾಕಿಸ್ತಾನ್, ಅ.9 ರಂದು ಶ್ರೀಲಂಕಾ, ಅ 13ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.