ಪ್ರಜಾಸ್ತ್ರ ಸುದ್ದಿ
ದುಬೈ(Dubai): ಐಸಿಸಿ(ICC) ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಸಂಜೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 9 ರನ್ ಗಳ ಅಂತರದಿಂದ ಸೋಲು ಅನುಭವಿಸಿದೆ. ಗುಂಪು ಹಂತದ 4 ಪಂದ್ಯಗಳಲ್ಲಿ 2ರಲ್ಲಿ ಗೆಲುವು 2ರಲ್ಲಿ ಸೋಲು ಕಂಡಿದೆ. 4 ಪಾಯಿಂಟ್ಸ್, +0.322 ರನ್ ರೇಟ್ ಹೊಂದಿದೆ. ಈ ಸೋಲಿನಿಂದ ಹರ್ಮನ್ ಪ್ರೀತ್ ಕೌರ್ ಬಳಗದ ಸೆಮಿ ಫೈನಲ್ ಕನಸು ಭಗ್ನವೆಂದು ಹೇಳಲಾಗುತ್ತಿದೆ.
ಟಾಸ್ ಗೆದ್ದ ಬ್ಯಾಟಂಗ್ ಆಯ್ಕೆ ಮಾಡಿಕೊಂಡ ಆಸೀಸ್ ನಾಯಕಿ ಥಿಲಾ ಮೆಗ್ರಾಥ್ ಪಡೆ ದೊಡ್ಡ ಸ್ಕೋರ್ ದಾಖಲಿಸದಿದ್ದರೂ ಸವಾಲಿನ ಗುರಿ ನೀಡಿತು. ಗ್ರೇಸ್ ಹ್ಯಾರಿಸ್ 40, ನಾಯಕಿ ಮೆಗ್ರಾಥ್ 32, ಎಲ್ಸಾ ಪೆರಿ 32 ರನ್ ಗಳಿಂದಾಗಿ 8 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಭಾರತ ಪರ ರೇಣುಕಾ ಸಿಂಗ್, ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ, ಪೂಜಾ ವಸ್ತ್ರಾಕರ್, ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.
120 ಬೌಲ್ ಗಳಲ್ಲಿ 152 ರನ್ ಗಳ ಸಾಧಾರಣ ಗುರಿಯನ್ನು ಮುಟ್ಟುವಲ್ಲಿ ಭಾರತ ಯಡವಿತು. ನಾಯಕಿ ಕೌರ್ 54 ರನ್ ಹೊರತು ಪಡಿಸಿದರೆ ಯಾರೂ ಸಾಥ್ ನೀಡದ ಪರಿಣಾಮ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ 9 ರನ್ ಗಳ ಅಂತರದಿಂದ ಸೋಲು ಅನುಭವಿಸಿತು. ಆಸೀಸ್ ಅನೆಬೆಲ್ ಶೋಫಿ ತಲಾ 2 ವಿಕೆಟ್ ಪಡೆದರು. ಮೆಗಾನ್ ಸ್ಕಟ್, ಗಾರ್ಡನರ್ ತಲಾ 1 ವಿಕೆಟ್ ಪಡೆದರು. ಶೋಫಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಇಂದು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯುವ ಪಂದ್ಯದ ಮೇಲೆ ಭಾರತದ ಕನಸು ನಿಂತಿದೆ. ನ್ಯೂಜಿಲೆಂಡ್ 3ರಲ್ಲಿ 2 ಗೆದ್ದು 1 ಸೋತಿದೆ. +0.282 ರನ್ ರೇಟ್ ಇದೆ. ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಭಾರತ ಹೊರ ಬೀಳಲಿದೆ. ಪಾಕಿಸ್ತಾನ 3ರಲ್ಲಿ 2 ಪಂದ್ಯ ಸೋತು 1 ಪಂದ್ಯ ಗೆದ್ದಿದೆ. -0.488 ರನ್ ರೇಟ್ ಇದೆ. ಹೀಗಾಗಿ ಕಡಿಮೆ ರನ್ ರೇಟ್ ಮೇಲೆ ಪಾಕಿಸ್ತಾನ ಗೆದ್ದರೆ ಭಾರತ ಸೆಮಿ ಫೈನಲ್ ಆಗಲು ಅವಕಾಶವಿದೆ. ಅದೇನಾಗುತ್ತೆ ನೋಡಬೇಕು.