ಪ್ರಜಾಸ್ತ್ರ ಸುದ್ದಿ
ಆನೇಕಲ್(Anekal): ಅತ್ತಿಬೆಲೆ ಕೈಗಾರಿಕ ಪ್ರದೇಶದಲ್ಲಿರುವ ಮರದ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ಅವಗಡ ನಡೆದಿದೆ. ಉತ್ತರ ಪ್ರದೇಶ ಮೂಲದ 24 ವರ್ಷದ ಗೋವಿಂದ್ ಎನ್ನುವ ಕಾರ್ಮಿಕ ಬಲಿಯಾಗಿದ್ದಾನೆ. ಯಡವನಹಳ್ಳಿ ಹತ್ತಿರ ಇರುವ ಕಾರ್ಖಾನೆ, ಪ್ರತಿಷ್ಠಿತ ಕಂಪನಿಗಳಿಗೆ ಸೋಫಾ, ಕುರ್ಚಿ ಸೇರಿ ಇತರೆ ವಸ್ತುಗಳನ್ನು ಪೂರೈಕೆ ಮಾಡುತ್ತಿತ್ತು. ಕಾರ್ಖಾನೆ ಪಕ್ಕದ ಶೆಡ್ ನಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ಮಲಗಿದ್ದರು. ಬೆಂಕಿ ಕಾಣಿಸಿಕೊಂಡಿದ್ದ ತಿಳಿದು ಎಲ್ಲರೂ ಓಡಿ ಬಂದಿದ್ದಾರೆ. ಈ ವೇಳೆ ಪ್ರಸ್ಸಿಂಗ್ ಯಂತ್ರದ ಬಳಿ ಗೋವಿಂದ್ ಕುಸಿದು ಬಿದ್ದಿದ್ದಾನೆ. ಬಳಿಕ ಎದ್ದು ಬರಲಾಗಿದೆ. ಬೆಂಕಿಗೆ ಆಹುತಿಯಾಗಿದ್ದಾನೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸುಮಾರು 5 ಕೋಟಿ ಮೌಲ್ಯದ ಮರದ ವಸ್ತುಗಳು, ಮಿಷನರಿಗಳು ಸುಟ್ಟು ಕರಕಲಾಗಿವೆ. ಕಾರ್ಖಾನೆ ಮಾಲೀಕ ಹರ್ಷದ್ ಪಾಟೀಲ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.