ಪ್ರಜಾಸ್ತ್ರ ಸುದ್ದಿ
ಡಬ್ಲುಡಬ್ಲುಇ ಸ್ಟಾರ್ ಆಟಗಾರ ಜಾನ್ ಸೀನಾ ನಿವೃತ್ತಿ ಘೋಷಿಸಿದ್ದಾರೆ. 17 ಬಾರಿ ಚಾಂಪಿಯನ್ ಆಗಿರುವ ಜಾನ್ ಸೀನಾಗೆ ಜಗತ್ತಿನಾದ್ಯಂತ ದೊಡ್ಡ ಮಟ್ಟದ ಫ್ಯಾನ್ ಬಳಗವಿದೆ. ಶನಿವಾರ ರಾತ್ರಿ ಗುಂಥರ್ ವಿರುದ್ಧ ನಡೆದ ವಿದಾಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕೊನೆಯ ಪಂದ್ಯ ಆಡಿದರು. ಆದರೆ, ಇದರಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿದರು.
ಕಳೆದ 23 ವರ್ಷಗಳಿಂದ ಜಾನ ಸೀನಾ ಹೊಡಿಬಡಿ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸ್ಟೈಲ್, ಆಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚು. 2024ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಬೆಸ್ಟ್ ಕಾಸ್ಟೂಮ್ ಡಿಸೈನರ್ ಪ್ರಶಸ್ತಿ ಘೋಷಣೆ ವೇಳೆ ಬೆತ್ತಲೆಯಾಗಿ ಬಂದು ಸಾಕಷ್ಟು ಸದ್ದು ಮಾಡಿದ್ದರು.




