ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಯತ್ನಾಳ್ ಹೊಸ ಪಕ್ಷ ಕಟ್ಟುವುದು ಸುಳ್ಳು. ಒಂದು ವರ್ಷದಲ್ಲಿ ಅವರು ಗೂಡಿಗೆ ಮರುಳುತ್ತಾರೆ. ಬಿಜೆಪಿಗೆ ಯತ್ನಾಳ್ ಅನಿವಾರ್ಯ. ಯತ್ನಾಳಗೆ ಬಿಜೆಪಿ ಅನಿವಾರ್ಯ ಎಂದು ಸಚಿವ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿಯವರೆ ಒಂದು ವರ್ಷದಲ್ಲಿ ಅವರನ್ನು ವಾಪಸ್ ಕರೆಯುತ್ತಾರೆ. ನಮ್ಮ ಪಕ್ಷ ಸೇರುವ ಪ್ರಶ್ನೆ ಬರಲ್ಲ. ನಮ್ಮ ಸಿದ್ಧಾಂತ ಅವರಿಗೆ ಹೊಂದಲ್ಲ. ಅವರಿಗೆ ಬಿಜೆಪಿಯೇ ಸೂಟ್. ಹೀಗಾಗಿ ವಾಪಸ್ ಬಿಜೆಪಿಗೆ ಹೋಗುತ್ತಾರೆ ಎಂದರು.
ಇನ್ನು ಬೆಲೆ ಏರಿಕೆ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸಬೇಕು. ಪ್ರತಿಭಟನೆ ಸರಿಯಲ್ಲ. ಬಿಜೆಪಿ ಆಡಳಿತ ಅವಧಿಯಲ್ಲಿಯೂ ಬೆಲೆ ಏರಿಕೆಗಳು ಆಗಿವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತಿಭಟನೆ ಅನಾವಶ್ಯಕ ಎಂದು ಹೇಳುವ ಮೂಲಕ ಬಿಜೆಪಿಯವರ ಅಹೋರಾತ್ರಿ ಧರಣಿಗೆ ಪ್ರತಿಕ್ರಿಯೆ ನೀಡಿದರು. ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸಿ ಕೊಡುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ ಅಂತಾ ಹೇಳಿದರು.