ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಇಂದು ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ತಾಲೂಕಿನ ಜಾಲವಾದ ಗ್ರಾಮದಲ್ಲಿಯೂ ಯೋಗ ದಿನವನ್ನು ಆಚರಿಸಲಾಯಿತು. ವಿದ್ಯಾ ಭಾರತಿ ಪ್ರಾಥಮಿಕ ಶಾಲೆ ಮತ್ತು ಮಹಾಂತಲಿಂಗ ಶಿವಾಚಾರ್ಯ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಮಹಾಂತೇಶ ವಡಿಗೇರಿ ಅವರು ಯೋಗದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದರ ಜೊತೆಗೆ ಯೋಗವನ್ನು ಕಲಿಸಿದರು.
ಈ ವೇಳೆ ಶಾಲೆಯ ಮುಖ್ಯ ಗುರುಗಳಾದ ವಿದ್ಯಾಧರ ಟಕ್ಕಳಕಿ, ಶಿಕ್ಷಕರಾದ ಸುಭಾಷ, ಯಲ್ಲಾಲಿಂಗ ಹೇರೂರ, ಶಿಕ್ಷಕಿಯರಾದ ಶೋಭಾ ವಡಿಗೇರಿ, ಪವಿತ್ರಾ ಕಾಮನಕೇರಿ, ಸಾಧನಾ ಸಾತಿಹಾಳ, ರೇಣುಕಾ ಟಕ್ಕಳಿಕಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.