Ad imageAd image

ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಋಷಿಮುನಿಗಳು: ತಾ.ಪಂ ಇಒ ರಾಮು.ಜಿ ಅಗ್ನಿ

Nagesh Talawar
ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಋಷಿಮುನಿಗಳು: ತಾ.ಪಂ ಇಒ ರಾಮು.ಜಿ ಅಗ್ನಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕು ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದಲ್ಲಿರುವ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರಾಮು.ಜಿ ಅಗ್ನಿ ಮಾತನಾಡಿ, ಹಲವು ಶತಮಾನಗಳ ಹಿಂದೆಯೇ ಭಾರತದ ಋಷಿಮುನಿಗಳು ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಆದರೆ ಇಂದಿನ ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವುದರಿಂದ ಪ್ರತಿಯೊಬ್ಬರು ಯೋಗದಿಂದ ದೂರ ಉಳಿಯುತ್ತಿದ್ದಾರೆ ಎಂದು ವಿಶಾದ ವ್ಯಕ್ತಪಡಿಸಿದರು.

ಓತಿಹಾಳ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ್ಷಿ ಸವಿತಾ ಇಂಗಳಗಿ ಯೋಗವನ್ನು ನಡೆಸಿಕೊಟ್ಟರು. ಸೂರ್ಯ ನಮಸ್ಕಾರದ ಮೂರು ವಿಧಗಳಾದ ಹಠ ಸೂರ್ಯ ನಮಸ್ಕಾರ, ಅಯ್ಯಂಗಾರ್ ಸೂರ್ಯ ನಮಸ್ಕಾರ ಮತ್ತು ಅಷ್ಟಾಂಗ ಸೂರ್ಯ ನಮಸ್ಕಾರ ಬಗ್ಗೆ ತಿಳಿಸಿಕೊಟ್ಟರು. ಈ ವೇಳೆ ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ನಿತ್ಯಾನಂದ ಯಲಗೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಯಮನಪ್ಪ ಹೊಸಮನಿ, ಐಇಸಿ ಸಂಯೋಕರಾದ ಭೀಮರಾಯ ಚೌಧರಿ, ಕಾರ್ಯದರ್ಶಿ ರಾಜಾಸಾಬ್ ಮುಜಾವರ, ಪ್ರಥಮ ದರ್ಜೆ ಸಹಾಯಕರಾದ ರಾಜಶೇಖರ ಹಿರೇಕುರುಬರ, ರಾಜು ವಡ್ಡರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article