ಪ್ರಜಾಸ್ತ್ರ ಸುದ್ದಿ
ಪ್ರಪಂಚದಲ್ಲಿಯೇ ಅತಿ ಹೆಚ್ಚು ವಜ್ರ ಉತ್ಪಾದಿಸುವ 2ನೇ ದೇಶವಾಗಿರುವ ಆಫ್ರಿಕಾದ ಬೊಟ್ಸವಾನಾದಲ್ಲಿ(Botswana) ಜಗತ್ತಿನಲ್ಲಿಯೇ 2ನೇ ಅತಿ ದೊಡ್ಡ ವಜ್ರ ದೊರೆತಿದೆ. ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಬೊಟ್ಸವಾನಾದ ಗಣಿ ಪ್ರದೇಶದಲ್ಲಿ ಬರೋಬ್ಬರಿ 2,492 ಕ್ಯಾರಟ್ ನ ವಜ್ರ(diamond) ದೊರೆತಿದೆ. ಇದರ ತೂಕ ಬರೋಬ್ಬರಿ ಅರ್ಧ ಕೆಜಿ ಇದೆ. ಫಿನಾನ್ಸಿಯಲ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ ಇದರ ಬೆಲೆ ಬರೋಬ್ಬರಿ 335 ಕೋಟಿ ರೂಪಾಯಿ ಎನ್ನಲಾಗುತ್ತಿದ್ದು, ಇನ್ನು ಹೆಚ್ಚಾಗುವ ಸಾಧ್ಯತೆಯಿದೆಯಂತೆ.
ದಕ್ಷಿಣ(africa) ಆಫ್ರಿಕಾದಲ್ಲಿ 1905ರಲ್ಲಿ 3,106 ಕ್ಯಾರಟ್ ನ ವಜ್ರ ಪತ್ತೆಯಾಗಿತ್ತು. ಇದು ಜಗತ್ತಿನ ಅತಿ ಹೆಚ್ಚಿನ ತೂಕದ ಮೊದಲ ವಜ್ರ. 2019ರಲ್ಲಿ ಕರೋವೆ ಗಣಿಯಲ್ಲಿ 1,758 ಕ್ಯಾರಟ್ ವಜ್ರ ಪತ್ತೆಯಾಯಿತು. ಇದನ್ನು ವಿಶ್ವದ 2ನೇ ಅತಿ ದೊಡ್ಡ(world 2nd biggest diamond) ವಜ್ರ ಎನ್ನಲಾಗಿತ್ತು. ಈಗ ಪತ್ತೆಯಾಗಿರುವ ವಜ್ರ ಇದನ್ನು ಮೀರಿಸಿದೆ. ಇದನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ. ಕಳೆದ ನೂರು ವರ್ಷಗಳ ಬಳಿಕ ಮತ್ತೊಂದು ಅತಿ ದೊಡ್ಡ ವಜ್ರ ಪತ್ತೆಯಾಗಿದೆ. ಇದನ್ನು ಯಾರು ಖರೀದಿಸುತ್ತಾರೆ ಎನ್ನುವ ಕುತೂಹಲವಿದೆ.