ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಅಂಡರ್-19 ಏಷ್ಯಕಪ್ ಫೈನಲ್ ಪಂದ್ಯದಲ್ಲಿ ಯುಂಗ್ ಇಂಡಿಯಾ ಯಡವಿದೆ. ಬಾಂಗ್ಲಾದೇಶದ ವಿರುದ್ಧ 59 ರನ್ ಗಳಿಂದ ಸೋಲುವ ಮೂಲಕ ಚಾಂಪಿಯನ್ಸ್ ಆಗುವ ಅವಕಾಶ ಕೈ ಚೆಲ್ಲಿದೆ. ಇದರೊಂದಿಗೆ ಬಾಂಗ್ಲಾ ಸತತವಾಗಿ 2ನೇ ಬಾರಿಗೆ ಚಾಂಪಿಯನ್ಸ್ ಆಗಿದೆ.
ಟಾಸ್ ಗೆದ್ದ ಇಂಡಿಯಾ ತಂಡದ ನಾಯಕ ಮೊಹಮ್ಮದ್ ಅಮಾನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿರು. ಬಾಂಗ್ಲಾ ಪರ ಮೊಹಮ್ಮದ್ ಸಾಹೀಬ್ ಜಮ್ಸ್ 40, ರಝಾನ್ ಹುಸೈನ್ 47, ಫರಿದ್ ಹಸನ್ 39 ರನ್ ಗಳಿಂದಾಗಿ ಕೇವಲ 198 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಯುಧಜಿತ್ ಗುಹಾ 2, ಚೇತನ್ ಶರ್ಮಾ 2, ಹಾರ್ದಿಕ್ ರಾಜ್ 2 ವಿಕೆಟ್ ಪಡೆದರು. ಕಿರಣ್ ಚೊಮಲೆ, ಕಾರ್ತಿಕೇಯ್ ಕೆಪಿ, ಆಯುಷ್ ಮಹಾತ್ರೆ ತಲಾ 1 ವಿಕೆಟ್ ಪಡೆದರು.
ಈ ಸಣ್ಣ ಗುರಿ ಬೆನ್ನು ಹತ್ತಿದ ಯುವ ಭಾರತ ಪಡೆ ಯಡವಿತು. ತಾಳ್ಮೆಯಿಂದ ಆಡಿದ್ದರೂ ಗೆಲುವಿನ ದಡ ಸೇರುತ್ತಿದ್ದರು. ಆದರೆ, ಯುವ ಆಟಗಾರರು ಬೇಗ ಬೇಗ ಔಟ್ ಆಗುವ ಮೂಲಕ 35.2 ಓವರ್ ಗಳಲ್ಲಿ ಕೇವಲ 139 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು. ಬಾಂಗ್ಲಾ ಇಕ್ಬಾಳ್ ಹಸನ್, ನಾಯಕ ಅಜಿಜುಲ್ ಹಕಿಂ ತಮಿಮ್ ತಲಾ 3 ವಿಕೆಟ್ ಪಡೆದರು. ಅಲ್ ಫಹಾದ್ 2, ಮರ್ಫು, ರಿಝಾನ್ ಹುಸೈನ್ ತಲಾ 1 ವಿಕೆಟ್ ಪಡೆದರು. ಇಕ್ಬಾಲ್ ಹಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಸಿರೀಸ್ ಆದರು.