Ad imageAd image

ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಯುವಕ ಸಾವು

Nagesh Talawar
ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಯುವಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ರಾಮಪ್ರಾಸದ ಗಲ್ಲಿಯ ಶುಭಂ ಸಕ್ಪಾಲ್(21) ಅನ್ನೋ ಯುವಕ ಮೃತಪಟ್ಟಿದ್ದಾನೆ. ಪ್ರಭು ಜಗತೆ, ಲಖನ್ ಚವ್ಹಾಣ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೋಬಳೆ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯನ್ನು ಮಂಗಳವಾರ ರಾತ್ರಿ ವಿಸರ್ಜನೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೊರಟಿದ್ದರು. ಗಾಂಧಿಚೌಕ್ ಬಳಿ ಬರುತ್ತಿದ್ದಾಗ ವಾಹನಕ್ಕೆ ಹಾಗೂ ಡಿಜೆ ಸಿಸ್ಟಂಗ್ ವಿದ್ಯುತ್ ತಗುಲದಂತೆ ಕೋಲಿನಿಂದ ಎತ್ತಿ ಹಿಡಿದಿದ್ದ ವೇಳೆ ವಿದ್ಯುತ್ ತಗುಲಿ ಈ ದುರಂತ ನಡೆದಿದೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article