ಪ್ರಜಾಸ್ತ್ರ ಸುದ್ದಿ
ತ್ರಿಶೂರ್(Trisuhar): ಕಾಂಗ್ರೆಸ್ ಸಂಸದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಗಾವಲು ವಾಹನ ತಡೆದ ಯುಟ್ಯೂಬರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಎಳನಾಡು ಮೂಲದ ಅನೀಶ್ ಅಬ್ರಾಹಂ ಎಂಬಾತನನ್ನು ವಶಕ್ಕೆ ಪಡೆದು ನಂತರ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮುನ್ನತ್ತಿ ಪೊಲೀಸರು ತಿಳಿಸಿದ್ದಾರೆ.
ವಯನಾಡು ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ವಂದೂರಿನಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾಗ ಮನ್ನುತ್ತಿ ಬೈಪಾಸ್ ಜಂಕ್ಷನ್ ನಲ್ಲಿ ಯುಟ್ಯೂಬರ್ ಅನೀಶ್ ಬೆಂಗಾವಲು ವಾಹನ ತಡೆದಿದ್ದಾನೆ. ಸಂಸದರ ಬೆಂಗಾವಲು ವಾಹನದ ಹಾರ್ನ್ ಸೌಂಡ್ ನಿಂದ ಸಿಟ್ಟಿಗೆದ್ದು ತನ್ನ ಕಾರು ಅಡ್ಡ ಹಾಕಿದ್ದಾನಂತೆ. ಆಗ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಜೀವಕ್ಕೆ ಅಪಾಯ ಮಾಡುವುದು, ಉದ್ದೇಶಪೂರ್ವಕವಾಗಿ ವಾಹನ ತಡೆದು ಸಂಬಂಧ ಪ್ರಕರಣ ದಾಖಲಾಗಿದೆ.