ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಿಲೆಟಿನ್(Gelatin Sticks) ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗಮಂಗಲದ ಕಾಳೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವಕನ ದೇಹ ಛಿದ್ರಗೊಂಡಿದೆ. ಆತನ ಕುರಿತು ಮಾಹಿತಿ ತಿಳಿದು ಬರಬೇಕಿದೆ. ಯುವತಿಯ ಮನೆಯ ಮುಂದೆ ಈ ಘಟನೆ ನಡೆದಿದೆ.
ಯುವಕ ಹಾಗೂ ಅಪ್ರಾಪ್ತೆ ನಡುವೆ ಪ್ರೀತಿ ಇದ್ದು, ಕಳೆದ ವರ್ಷ ಓಡಿ ಹೋಗಿದ್ದರಂತೆ. ಆಗ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ನಂತರ ಅವರನ್ನು ಪತ್ತೆ ಕರೆದುಕೊಂಡು ಬರಲಾಗಿದೆಯಂತೆ. ಬಳಿಕ ಆತನನ್ನು ಬಂಧಿಸಲಾಗಿದೆ. ಜಾಮೀನಿನ ಮೇಲೆ ಹೊರ ಬಂದ ಯುವಕ ಕೈಯಲ್ಲಿ ಜಿಲೆಟಿನ್ ಹಿಡಿದುಕೊಂಡು ಮನೆ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.