ಪ್ರಜಾಸ್ತ್ರ ಸುದ್ದಿ
ಕ್ರಿಕೆಟ್ ಅಂಗಳದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮೂಲಕ ಕಮಾಲ್ ಮಾಡಿದ ಟೀಂ ಇಂಡಿಯಾದ ಆಟಗಾರರಲ್ಲಿ ಯುವರಾಜ್ ಸಿಂಗ್(yuvraj singh) ಒಬ್ಬರು. 2011ರಲ್ಲಿ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಲು ಕಾರಣವಾಗುವುದರ ಜೊತೆಗೆ ಮ್ಯಾನ್ ಆಫ್ ದ್ ಸಿರೀಸ್ ಪ್ರಶಸ್ತಿ ಸಹ ಪಡೆದಿದ್ದರು. ಕ್ಯಾನ್ಸರ್ ಗೆ ತುತ್ತಾಗಿದ್ದ ಯುವ್ವಿ ಅಂಗಳದಲ್ಲಿಯೂ ಹೋರಾಡಿದ್ದರು. ಇಂತಹ ಆಟಗಾರನ ಸಿನಿಮಾ ನಿರ್ಮಾಣಕ್ಕೆ ಟಿ-ಸಿರೀಸ್ ಮುಂದೆ ಬಂದಿದೆ.
ಸಾಕಷ್ಟು ಸ್ಪೂರ್ತಿದಾಯಕ ಬದುಕು ಹೊಂದಿರುವ ಮಾಜಿ ಕ್ರಿಕೆಟಿಗ(cricketer)ಯುವರಾಜ್ ಸಿಂಗ್ ಜೀವನ ಕುರಿತು ಭಾಗ್ ಚಂದಿಕಾ ಸಹ ನಿರ್ಮಾಣದೊಂದಿಗೆ ಟಿ-ಸಿರೀಸ್ ಸಿನಿಮಾ ಮಾಡಲಿದೆ ಎಂದು ತಿಳಿಸಿದೆ. ಈ ಬಗ್ಗೆ ಯುವರಾಜ್ ಸಿಂಗ್ ಸಹ ಸಂತಸ ಹಂಚಿಕೊಂಡಿದ್ದಾರೆ. 13ನೇ ವರ್ಷಕ್ಕೆ ಕ್ರಿಕೆಟ್ ಅಂಗಳಕ್ಕೆ ಬಂದ ಯುವರಾಜ್ ಸಿಂಗ್ ಸಾಕಷ್ಟು ಏಳು ಬೀಳಿನ ಬದುಕು ಕಂಡಿದ್ದಾರೆ.
ಬಾಲಿವುಡ್ ನಲ್ಲಿ ಈಗಾಗ್ಲೇ ಎಂ.ಎಸ್(ms dhoni) ಧೋನಿ, ಕಪಿಲ್(kapil dev) ದೇವ್, ಅಜರ್ ದ್ದೀನ್(azharuddin) ಸೇರಿ ಹಲವು ಸ್ಟಾರ್ ಕ್ರಿಕೆಟ್ ಆಟಗಾರರ ಸಿನಿಮಾ ತೆರಿಗೆ ಬಂದಿವೆ. ಈಗ ಯುವರಾಜ್ ಸಿಂಗ್ ಬದುಕಿನ ಕುರಿತು ಸಿನಿಮಾ ಬರ್ತಿದ್ದು, ಅವರ ಅಪಾರ ಅಭಿಮಾನಿಗಳು ಸೇರಿ ಅನೇಕರಿಗೆ ಸ್ಪೂರ್ತಿಯಾಗಲಿದೆ.