ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಚನ್ನಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕಾಲಾ(ಕರಿಯ) ಕುಮಾರಸ್ವಾಮಿ ಎಂದು ಕರೆದಿದ್ದರು. ಇದು ಬಹುದೊಡ್ಡ ರಾಜಕೀಯ ತಿರುವು ಪಡೆದುಕೊಂಡಿದೆ. ಜೆಡಿಎಸ್, ಬಿಜೆಪಿನವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್, ಪ್ರೀತಿಯಿಂದ ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತೇನೆ. ಅವರು ನನ್ನನ್ನು ಕುಳ್ಳ ಎನ್ನುತ್ತಾರೆ. ಹೀಗಾಗಿ ನಾನು ಅವರನ್ನು ಕರಿಯಣ್ಣ ಎಂದಿರುವೆ ಹೊರತು ಬಣ್ಣದ ಆಧಾರದ ಮೇಲೆ ಕರೆದಿಲ್ಲ ಎಂದರು.
ಮೊದಲಿನಿಂದಲೂ ನಾನು ಅವರನ್ನು ಹಾಗೇ ಕರೆಯುವುದು. ಭಾಷಣದಲ್ಲಿ ಹಾಗೇ ಹೇಳಿದ್ದೇನೆ. ನಾವು ಬೇರೆ ಪಕ್ಷದಲ್ಲಿದ್ದರೂ ನಮ್ಮ ಸ್ನೇಹ ಅಳಿಯಲ್ಲ. ನನ್ನ ರಾಜಕೀಯ ಗುರು ಹೆಚ್.ಡಿ ದೇವೇಗೌಡರು. ಹಳೆಯದನ್ನು ಮರೆಯುವುದಕ್ಕೆ ಆಗಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.