Ad imageAd image

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ: ಗೃಹ ಸಚಿವ ಜಿ.ಪರಮೇಶ್ವರ್

Nagesh Talawar
ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ: ಗೃಹ ಸಚಿವ ಜಿ.ಪರಮೇಶ್ವರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದ ಜೊಂಬಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾತನಾಡಿದ್ದು, ಇದೊಂದು ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವೈರಲ್ ಮಾಡಿದ ಯುವಕನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಪಂಜಾಬ್ ಮೂಲದ ಲಾರಿ ಚಾಲಕನಿಗೆ ಕುಡಿತದ ಚಟವಿದೆ. ಈ ಹಿಂದೆ ಪಂಜಾಬ್ ನಲ್ಲಿ ಡ್ರಗ್ಸ್ ತೆಗೆದುಕೊಂಡಿದ್ದನಂತೆ. ಯಾವುದೋ ಆರೋಗ್ಯದ ಸಮಸ್ಯೆಗೆ ಔಷಧಿ ತೆಗೆದುಕೊಂಡಿದ್ದಾನೆ. ಹೀಗಾಗಿ ಅದರ ಪರಿಣಾಮವಾಗಿದೆ. ಜೊಂಬಿ ಡ್ರಗ್ಸ್ ಏನಿಲ್ಲ. ಇದು ಸತ್ಯಕ್ಕೆ ದೂರ. ಈ ಬಗ್ಗೆ ವಿಡಿಯೋ ವೈರಲ್ ಮಾಡಿದ ವಿದ್ಯಾರಣ್ಯಪುರಂ ನಿವಾಸಿ ಹೇಮಂತ್ ಅನ್ನೋ ಯುವಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ ಅಂತಾ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article