ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಇದೀಗ ಎಲ್ಲೆಡೆ ಸ್ಥಳೀಯ ಚುನಾವಣೆಯ ಜೊತೆಗೆ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಯಾವಾಗ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕ ಚುನಾವಣಾ ಆಯೋಗದ ಆಯುಕ್ತರಾದ ಸಂಗ್ರೇಶಿ, ಏಪ್ರಿಲ್ ವೊಳಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ನಡೆಸಲಾಗುವುದು. ಇದರ ನಂತರ ಸ್ಥಳೀಯ ಚುನಾವಣೆ ನಡೆಸಲಾಗುತ್ತೆ ಎಂದಿದ್ದಾರೆ.
ಈ ಕಾರಣಕ್ಕೆ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡುತ್ತಿದ್ದೇನೆ. ಮತದಾರರ ಪಟ್ಟಿ, ಮೀಸಲಾತಿ ಪಟ್ಟಿ ಕೊಟ್ಟ ಬಳಿಕ ಚುನಾವಣೆ ಪ್ರಕ್ರಿಯೆ ಶುರುವಾಗಲಿವೆ. ಆಗ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಲಾಗುವುದು. ಅದಕ್ಕೂ ಮೊದಲು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಏಪ್ರಿಲ್ ನಂತರ ಸ್ಥಳೀಯ ಚುನಾವಣೆ ನಡೆಯಲಿದೆ ಅಂತಾ ಹೇಳಿದ್ದಾರೆ.