ಇಸ್ರೋದಿಂದ 100ನೇ ಉಡಾವಣೆ: ಎಸ್.ಸೋಮನಾಥ್

Nagesh Talawar
ಇಸ್ರೋದಿಂದ 100ನೇ ಉಡಾವಣೆ: ಎಸ್.ಸೋಮನಾಥ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಜನವರಿಯಲ್ಲಿ ಐತಿಹಾಸಿಕ 100ನೇ ಉಡಾವಣೆ ನಡೆಸಲಾಗುವುದು ಎಂದು ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಜಿಯೋಸಿಂಕ್ರೋನಸ್ ಸ್ಯಾಟ್ ಲೈಟ್ ಲಾಂಚ್ ವೆಹಿಕಲ್ ಅನ್ನು ಆಂಧ್ರದಲ್ಲಿರುವ ಸತಿಶ್ ಧವನ್ ಬ್ಯಾಹಾಕಾಶ ಕೇಂದ್ರಿಂದ ಜನವರಿಯಲ್ಲಿ ಉಡಾವಣೆ ಮಾಡಲಾಗುವುದು ಎಂದರು.

ಸೋಮವಾರ ರಾತ್ರಿ 10 ಗಂಟೆಗೆ 99ನೇ ಉಡ್ಡಯನ ಯೋಜನೆಯ ಭಾಗವಾಗಿ ಪಿಎಸ್ ಎಲ್ ವಿ ರಾಕೆಟ್ ಸ್ಪೇಡೆಕ್ಸ್ ಯೋಜನೆಗಾಗಿ ಎರಡು ಉಪಗ್ರಹಗಳನ್ನು ಹೊತ್ತು ಲಾಂಚ್ ಮಾಡಲಾಗಿದೆ. 2025 ಜನವರಿಯಲ್ಲಿ ಜೆಎಸ್ಎಲ್ ವಿ ಎನ್ ವಿಎಸ್-02 ನ್ಯಾವಿಗೇಷನ್ ಉಪಗ್ರಹವನ್ನು ಹಾರಿಸುವ ಮೂಲಕ ಐತಿಹಾಸಿಕ 100ನೇ ಉಡಾವಣೆಯನ್ನು ಸಂಭ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article