Ad imageAd image

ಹೈಪರ್ ಸಾನಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ

ಇಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾಗಿದೆ

Nagesh Talawar
ಹೈಪರ್ ಸಾನಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಒಡಿಶಾ(Odisha): ಇಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿ ಹೈಪರ್ ಸಾನಿಕ್ ಕ್ಷಿಪಣಿ(Hypersonic Missile) ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ತಿಳಿಸಿದ್ದಾರೆ. ಈ ಮೂಲಕ ಹೈಪರ್ ಸಾನಿಕ್ ಕ್ಷಿಪಣಿ ಇರುವ ಕೆಲವೇ ರಾಷ್ಟ್ರಗಳ ಎಲೈಟ್ ಗ್ರೂಪ್ ಗೆ(Elite Group) ಭಾರತ ಸೇರಿದೆ.

ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಕ್ಷಿಪಣಿ ಹೊಂದಿರುವ ಕೆಲವು ರಾಷ್ಟ್ರಗಳ ಭಾರತ ಸ್ಥಾನ ಪಡೆದಿದೆ. ಇಂತಹ ಸುಧಾರಿತ ಮಿಲಿಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಿದೆ. ಇದರಿಂದಾಗಿ ನಮ್ಮ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ. ಹೈಪರ್ ಸಾನಿಕ್ ಕ್ಷಿಪಣಿ 1,500 ಕಿಲೋ ಮೀಟರ್ ಗೂ ಹೆಚ್ಚು ದೂರ ಪೇಲೋಡ್ ಗಳನ್ನು ತೆಗೆದುಕೊಂಡು ಹೋಗುವ ತಾಕತ್ತು ಹೊಂದಿದೆ. ಇದು ಎಲ್ಲ ಸೇನಾಪಡೆಗಳ ಉಪಯೋಗಕ್ಕೆ ಬರಲಿದೆ. ಅದನ್ನು ಸಾಧಿಸಿದ ಡಿಆರ್ ಡಿಒ(DRDO), ಸಶಸ್ತ್ರ ಪಡೆಗಳನ್ನು ಅವರು ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article