ದೇಶದಲ್ಲಿ ಮತ್ತೊಂದು ಸೇತುವೆ ಕುಸಿತ…

62

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ಬನೇಯಪುರ ಬ್ಲಾಕ್ ನಲ್ಲಿರುವ ಗಂದಕಿ ನದಿಗೆ ಅಡ್ಡಲಾಗಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಗುರುವಾರ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ದೇಶದಲ್ಲಿ ಕಳೆದ 15 ದಿನಗಳಲ್ಲಿ 10 ಸೇತುವೆಗಳು ಕುಸಿದಿವೆ. ಇದೆ ಸರನ್ ಜಿಲ್ಲೆಯ ಜನತಾ ಬಜಾರ್ ಹಾಗೂ ಲಹಲಾದ್ ಪುರ ಪ್ರದೇಶದಲ್ಲಿ ಬುಧವಾರ 2 ಸೇತುವೆಗಳು ಕುಸಿದಿವೆ. ಈ ಮೂಲಕ 24 ಗಂಟೆಯಲ್ಲಿ ಮೂರು ಸೇತುವೆಗಳು ಬಿಹಾರದಲ್ಲಿ ಕುಸಿದಿವೆ.

ಹೀಗೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೇತುವೆಗಳು ಕುಸಿದು ಬೀಳುತ್ತಿವೆ. ಇದರಲ್ಲಿ ಹಲವು ದಶಕಗಳ ಸೇತುವೆಗಳಿದ್ದರೆ ಕೆಲವು ಇತ್ತೀಚೆಗೆ ನಿರ್ಮಿಸದ ಸೇತುವೆಗಳಿವೆ. ಇದರಲ್ಲಿ ಅಷ್ಟೊಂದು ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಇದೆಲ್ಲವೂ ಸಾಕ್ಷಿಯಾಗುತ್ತಿವೆ.




error: Content is protected !!