ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ(Fish) ಸಂಪದ ಯೋಜನೆಯಡಿ 2020-21 ರಿಂದ 2023-24ನೇ ಸಾಲಿನವರೆಗಿನ ಬಾಕಿ ಉಳಿದ ಘಟಕಗಳಿಗೆ ಮೀನುಗಾರಿಕೆ ಇಲಾಖೆಯಿಂದ ಸಹಾಯಧನ(Subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಮೀನು ಕೃಷಿ ಕೊಳ ನಿರ್ಮಾಣ, ಸಣ್ಣ ಗಾತ್ರದ ಆರ್.ಎ.ಎಸ್(RAS) ಘಟಕ, ಮತ್ಸ್ಯ ವಾಹಿನಿ ಯೋಜನೆಯಡಿ ತ್ರಿಚಕ್ರ ವಾಹನ ಪರವಾನಿ ಆಧಾರದಲ್ಲಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 5, 2024 ಕೊನೆಯ ದಿನವಾಗಿದೆ. ಆಸಕ್ತ ಮೀನು ಕೃಷಿಕರು(Farmers) ಸಂಬಂಧಪಟ್ಟ ತಾಲೂಕಾ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ವಿಜಯಪುರ (9986132717), ಮೀನುಗಾರಿಕೆ ಸಹಾಯಕ ನಿರ್ದೇಶಕರು ವಿಜಯಪುರ (9845927110), ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುದ್ದೇಬಿಹಾಳ (9845927110) ಇವರನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆ(Department of Fisheries) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ